Friday, October 4, 2024
Google search engine
Homeಕ್ರೀಡೆeuro cup: ಜರ್ಮನಿ ವಿರುದ್ಧ 2-1ರಿಂದ ಗೆದ್ದ ಸ್ಪೇನ್ ಸೆಮೀಸ್ ಗೆ ಲಗ್ಗೆ

euro cup: ಜರ್ಮನಿ ವಿರುದ್ಧ 2-1ರಿಂದ ಗೆದ್ದ ಸ್ಪೇನ್ ಸೆಮೀಸ್ ಗೆ ಲಗ್ಗೆ

ಹೆಚ್ಚುವರಿ ಆಟದ ಕೊನೆಯ ನಿಮಿಷದಲ್ಲಿ ಮೈಕಲ್ ಮೆರಿನೊ ಸಿಡಿಸಿದ ಗೋಲಿನ ನೆರವಿನಿಂದ ಜರ್ಮನಿ ತಂಡವನ್ನು ಮಣಿಸಿದ ಸ್ಪೇನ್ ತಂಡ ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಕಲ್ ಮೆರಿನೊ (120+5ನೇ ನಿಮಿಷ) ಮತ್ತು ಡೇನಿ ಓಯಿಮೊ (51ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರೆ, ಜರ್ಮನಿ ಪರ ಫ್ಲೋರಿಯಾನ್ ವಿಟ್ಜ್ (89ನೇ ನಿಮಿಷ) ಒಂದು ಗೋಲು ಬಾರಿಸಿದರು.

ಮೊದಲ ಅವಧಿಯ ಆಟ ಪೈಪೋಟಿಯಿಂದ ಕೂಡಿದ್ದರೂ ಯಾವುದೇ ಗೋಲು ದಾಖಲಾಗದೇ ಸಮಬಲದಲ್ಲಿ ಅಂತ್ಯಗೊಂಡಿತ್ತು. ಆದರೆ ಎರಡನೇ ಅವಧಿಯ ಆಟದ ಆರಂಭದಲ್ಲೇ ಡೇನಿ ಓಯಿಮೊ ಗಳಿಸಿ ಸ್ಪೇನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಸ್ಪೇನ್ ಇನ್ನೇನು ಗೆದ್ದೇ ಬಿಡುತ್ತದೆ ಎಂದು ಭಾವಿಸಿರುವಾದ ಪಂದ್ಯದ ನಿಗದಿತ ಅವಧಿಯ ಆಟದ ಕೊನೆಯಲ್ಲಿ ಫ್ಲೋರಿಯಾನ್ ಗೋಲು ಬಾರಿಸಿ ಸಮಬಲ ಸಾಧಿಸಿದ್ದರಿಂದ ಪಂದ್ಯ ರೋಚಕ ತಿರುವು ಪಡೆಯಿತು.

ಹೆಚ್ಚುವರಿ ಆಟದ ಕೊನೆಯಲ್ಲಿ ಮತ್ತೆ ಸ್ಪೇನ್ ಪರ ಮೈಕಲ್ ಮೆರಿನೊ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments