Sunday, September 8, 2024
Google search engine
Homeತಾಜಾ ಸುದ್ದಿಚಿಲಿಯಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪನ

ಚಿಲಿಯಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪನ

ಚಿಲಿಯ ಅಂಟಫೊಗೊಸ್ಟಾದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಯುರೋಪಿಯನ್-ಮೆಡಿಟರೇನಿಯನ್ ಸೆಸಿಮೊಲೊಜಿಕಲ್ ಕೇಂದ್ರ ಭೂಕಂಪನ ಮಾಹಿತಿ ನೀಡಿದ್ದು, ಶುಕ್ರವಾರ ಮುಂಜಾನೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆ ದಾಖಲಿಸಿದೆ.

ಭೂಕಂಪನದಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಆದರೆ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ 5.8 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, 2020ರಲ್ಲಿ ಸಂಭವಿಸಿದ ಭೂಕಂಪನದಲ್ಲಿ 500ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments