Saturday, July 6, 2024
Google search engine
Homeಕ್ರೀಡೆಟಿ-20 ವಿಶ್ವಕಪ್: ಸೂರ್ಯ, ಬುಮ್ರಾ ಆಟದಿಂದ ಭಾರತಕ್ಕೆ ಸುಲಭ ತುತ್ತಾದ ಆಫ್ಘಾನಿಸ್ತಾನ

ಟಿ-20 ವಿಶ್ವಕಪ್: ಸೂರ್ಯ, ಬುಮ್ರಾ ಆಟದಿಂದ ಭಾರತಕ್ಕೆ ಸುಲಭ ತುತ್ತಾದ ಆಫ್ಘಾನಿಸ್ತಾನ

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಅರ್ಧಶತಕ ಹಾಗೂ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿ ನೆರವಿನಿಂದ ಭಾರತ ತಂಡ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೂಪರ್-8 ಪಂದ್ಯದಲ್ಲಿ 47 ರನ್ ಗಳ ಭಾರೀ ಅಂತರದಿಂದ ಆಫ್ಘಾನಿಸ್ತಾನ ತಂಡವನ್ನು ಸೋಲಿಸಿದೆ.

ಬ್ರಿಡ್ಜ್ ಟೌನ್ ನಲ್ಲಿ ಗುರುವಾರ ನಡೆದ ಗುಂಪು-1ರ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಆಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 134 ರನ್ ಗೆ ಆಲೌಟಾಯಿತು.

ಭಾರತದ ಪರ ಮಾರಕ ದಾಳಿ ಸಂಘಟಿಸಿದ ಜಸ್ ಪ್ರೀತ್ ಬುಮ್ರಾ 4 ಓವರ್ ಗಳಲ್ಲಿ 7 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments