ಚಲಿಸುತ್ತಿದ್ದ ರೈಲಿನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆದಿದ್ದು, ರೈಲ್ವೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಭದ್ರಕ್ ಜಿಲ್ಲೆಯ ಚರಂಪಾ ಸ್ಟೇಷನ್ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ನಂದನ್ ಕಾನನ್ ಎಕ್ಸ್ ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ದಾಳಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಸಾವು-ನೋವು ವರದಿ ಆಗದೇ ಇದ್ದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಿಬ್ಬಂದಿ ನಂದನ್ ಕಾನನ್ ಎಕ್ಸ್ ಪ್ರೆಸ್‌ಗೆ ಭದ್ರತೆ ಒದಗಿಸಿದರು ಮತ್ತು ಪುರಿಯವರೆಗೆ ಬೆಂಗಾವಲು ಮಾಡಿದರು ಎಂದು ರೈಲ್ವೇ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ, ಈ ವಿಷಯವನ್ನು ಈಗ ಜಿಆರ್‌ಪಿ ತನಿಖೆ ನಡೆಸುತ್ತಿದೆ.
ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಳಿಗ್ಗೆ ಆದ್ದರಿಂದ ಬಹುತೇಕ ಪ್ರಯಾಣಿಕರು ಕಿಟಕಿ ಮುಚ್ಚಿದ್ದರಿಂದ ಯಾವುದೇ ಹಾನಿ ಆಗಿಲ್ಲ. 12816 ಆನಂದ್ ವಿಹಾರ್-ಪುರಿ ನಂದನ್ ಕಾನನ್ ಎಕ್ಸ್ ಪ್ರೆಸ್‌ನ ಗಾರ್ಡ್ ವ್ಯಾನ್‌ನ ಕಿಟಕಿಯಲ್ಲಿ ಏನಾದರೂ ಚುಚ್ಚುತ್ತಿದೆ ಎಂದು ಪರಿಶೀಲಿಸಿದಾಗ ಗುಂಡುಗಳು ತಾಗಿರುವುದು ಬೆಳಕಿಗೆ ಬಂದಿದೆ.