Monday, July 1, 2024
Google search engine
Homeತಾಜಾ ಸುದ್ದಿಮಳೆಗೆ ಕುಸಿದುಬಿದ್ದ ರಾಜ್ ಕೋಟ್ ವಿಮಾನ ನಿಲ್ದಾಣದ ಮೇಲ್ಫಾವಣಿ!

ಮಳೆಗೆ ಕುಸಿದುಬಿದ್ದ ರಾಜ್ ಕೋಟ್ ವಿಮಾನ ನಿಲ್ದಾಣದ ಮೇಲ್ಫಾವಣಿ!

ಭಾರೀ ಮಳೆಗೆ ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್-1 ಮೇಲ್ಫಾವಣಿ ಕುಸಿದು ಬಿದ್ದ ಘಟನೆ ಬೆನ್ನಲ್ಲೇ ಇದೀಗ ರಾಜ್ ಕೋಟ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರೂರಾದ ಗುಜರಾತ್ ನ ರಾಜ್ ಕೋಟ್ ನ ವಿಮಾನ ನಿಲ್ದಾಣಕ್ಕೆ ಹೊರಗಡೆ ಹಾಕಲಾಗಿದ್ದ ಸಾಧಾರಣ ಟರ್ಮಿನಲ್ ಮೇಲ್ಛಾವಣಿ ಸಾಧಾರಣ ಮಳೆಗೆ ಕುಸಿದುಬಿದ್ದಿದೆ.

ಪ್ರಯಾಣಿಕರ ಪಿಕಪ್ ಅಂಡ್ರ ಡ್ರಾಪ್ ಸ್ಥಳದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮೇಲ್ಫಾವಣಿ ಇದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು, ಯಾವುದೇ ಪ್ರಾಣಾಪಾಯದ ವರದಿ ಆಗಿಲ್ಲ.

ದೆಹಲಿಯಲ್ಲಿ ಟರ್ಮಿನಲ್-1 ಭಾರೀ ಮಳೆಯಿಂದ ಕುಸಿದುಬಿದ್ದಿದ್ದರಿಂದ ಒಬ್ಬರು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದರು. ಅಲ್ಲದೇ ಟರ್ಮಿನಲ್ ನಲ್ಲಿ ಧಾರಾಕಾರವಾಗಿ ಮಳೆ ನೀರು ಸೋರುತ್ತಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments