Saturday, October 5, 2024
Google search engine
Homeಅಪರಾಧಗಂಡನ ಮೇಲಿನ ಸಿಟ್ಟಿಗೆ ಮಗಳನ್ನು ಕೊಂದು 4 ಕಿ.ಮೀ. ಶವದ ಜೊತೆ ತಿರುಗಾಡಿದ ಪತ್ನಿ!

ಗಂಡನ ಮೇಲಿನ ಸಿಟ್ಟಿಗೆ ಮಗಳನ್ನು ಕೊಂದು 4 ಕಿ.ಮೀ. ಶವದ ಜೊತೆ ತಿರುಗಾಡಿದ ಪತ್ನಿ!

ಗಂಡನ ಜೊತೆ ಜಗಳ ಮಾಡಿಕೊಂಡ ಸಿಟ್ಟಿನಲ್ಲಿ 3 ವರ್ಷದ ಮಗಳನ್ನು ಹತ್ಯೆಗೈದ ಪತ್ನಿ ಸುಮಾರು 4 ಕಿ.ಮೀ.ವರೆಗೆ ನಗರದ ಬೀದಿಗಳಲ್ಲಿ ಶವ ಹೊತ್ತು ಸುತ್ತಾಡಿ ಪೊಲೀಸರಿಗೆ ಶರಣಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಟ್ವಿಂಕಲ್ ರಾಹುತ್ (23) ಈ ಕೃತ್ಯ ಎಸಗಿದ್ದು, ಪತಿ ಲಕ್ಷ್ಮಣ್ ರಾವುತ್ (24) ಅವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿ ಕೆಲಸದ ಪ್ರಯುಕ್ತ ನಾಗ್ಪುರಕ್ಕೆ ಆಗಮಿಸಿದ್ದರು.

ಎಂಐಡಿಸಿ ಪ್ರದೇಶದಲ್ಲಿ ಪೇಪರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಸಮೀಪದಲ್ಲೇ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ದಂಪತಿಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಪದೇಪದೆ ಇಬ್ಬರ ನಡುವೆ ಜಗಳ ಆಗುತ್ತಿತ್ತು.

ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ದಂಪತಿ ನಡುವೆ ಜಗಳ ಉಂಟಾಗಿದ್ದು, ಗಂಡನ ಮೇಲಿನ ಸಿಟ್ಟಿನಿಂದ ಮನೆಯಿಂದ ಹೊರಗೆ ಹೋದ ಪತ್ನಿ 3 ವರ್ಷದ ಮಗಳನ್ನು ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾಳೆ.

ಮಗು ಸತ್ತ ನಂತರ ಶವವನ್ನು ಹೊತ್ತು ಸುಮಾರು 4 ಕಿ.ಮೀ.ವರೆಗೆ ನಗರದ ಬೀದಿಗಳಲ್ಲಿ ಸುತ್ತಾಡಿದ್ದಾಳೆ. ಈ ವೇಳೆ ಗಸ್ತು ವಾಹನ ಪೊಲೀಸರು ಗಮನಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments