Saturday, September 7, 2024
Google search engine
Homeಜ್ಯೋತಿಷ್ಯಮನೆಯಲ್ಲಿ ದಾರಿದ್ರ್ಯ ಬರಲು ನಾವು ಮಾಡುವ ಈ 30 ತಪ್ಪುಗಳೇ ಕಾರಣ!

ಮನೆಯಲ್ಲಿ ದಾರಿದ್ರ್ಯ ಬರಲು ನಾವು ಮಾಡುವ ಈ 30 ತಪ್ಪುಗಳೇ ಕಾರಣ!

ಮನೆಯಲ್ಲಿ ಪದೇಪದೆ ಕಷ್ಟ, ಸಮಸ್ಯೆಗಳು ಬರುತ್ತಿದ್ದು, ಇದರಿಂದ ಯಾವಾಗ ಬಿಡುಗಡೆ ಅಂತ ಯೋಚಿಸುತ್ತಿದ್ದೀರಾ? ಕೆಲವೊಮ್ಮೆ ನಿಮ್ಮ ಸಮಯ ಉತ್ತಮವಾಗಿದ್ದರೂ ಪದೇಪದೆ ಕಾಡುವ ಸಮಸ್ಯೆಗಳಿಗೆ ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳೇ ಕಾರಣವಾಗಿದೆ.  ನೀವು ಪ್ರತಿದಿನ ಮನೆಯಲ್ಲಿ ಹೇಗೆ ನಡೆದುಕೊಳ್ಳುತ್ತಿರಿ. ಊಟ, ನಿದ್ದೆ ಮುಂತಾದ ವಿಷಯಗಳ ಬಗ್ಗೆ ಗಮನ ಹರಿಸಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ನಿಮ್ಮ ಜೀವನ ಸುಖಕರವಾಗಲಿದೆ.

ಮನೆಗೆ ದಾರಿದ್ರ್ಯ ಬರಲು ನಾವು ತಿಳಿದೋ ತಿಳಿಯದೇಯೋ ಮಾಡುವ ಈ 30 ತಪ್ಪುಗಳೇ ಕಾರಣ!

ಪ್ರತಿದಿನ ಊಟ ಮಾಡುವ ವೇಳೆಗೆ ಅನಾವಶ್ಯಕವಾಗಿ ಯೋಚನೆಗಳನ್ನು ಮಾಡುತ್ತಾ ತಟ್ಟೆಯ ಮುಂದೆ ಕಣ್ಣೀರು ಹಾಕುತ್ತಾರೆ. ಅನ್ನ ದೇವರಿಗೆ ಸಮಾನ ಎಂದು ಪರಿಗಣಿಸುವುದರಿಂದ ಕಣ್ಣೀರು ಹಾಕಿದರೆ ಕಷ್ಟಗಳು ಹೆಚ್ಚಾಗಲಿವೆ.

ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡಬೇಕು. ತೊಡೆಯ ಮೇಲೆ ಇಟ್ಟುಕೊಂಡು ಊಟ  ಮಾಡಬಾರದು. ರೋಗಿಗಳು, ಭಿಕ್ಷುಕರು ಮತ್ತು ನಿರ್ಗತಿಕರು ತೊಡೆಯ ಮೇಲೆ ತಟ್ಟೆ ಇಟ್ಟುಕೊಂಡು ಊಟ ಮಾಡುತ್ತಾರೆ. ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡಿ.

ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ. ಇದರಿಂದ ಮನಸ್ಸಿನಲ್ಲಿ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಹಸಿರು ಹಾಗೂ ಬೆಳೆಯುವ ಗಿಡಗಳು ಇದ್ದರೆ ಪಾಸಿಟಿವ್ ಎನರ್ಜಿ ಮನೆಯಲ್ಲಿ ಇರುತ್ತದೆ.

ಸಾಧ್ಯವಾದಷ್ಟು ದೇವರಿಗೆ ಮನೆಯ ಹೂಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ. ಹೊರಗಡೆಯಿಂದ ತಂದ ಹೂವಿನಿಂದ ಪೂಜೆ ಮಾಡುವ ಮುನ್ನ ಮನೆಯ ನೀರನ್ನು ಸಿಂಪಡಿಸಿ ಶುದ್ಧ ಮಾಡಿ ನಂತರ ಉಪಯೋಗಿಸಬೇಕು..

ನಿಂತ ಗಡಿಯಾರವು ಅಶುಭ ಲಕ್ಷಣ. ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ. ಮನೆಯ ಎಲ್ಲೆಡೆ ಗಡಿಯಾರಗಳನ್ನು ಇಡುವುವುದು ಕೂಡ ಒಳ್ಳೆಯದಲ್ಲ.

ಮನೆಯ ಮುಖ್ಯದ್ವಾರದ ಮುಂದೆ ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿರಬೇಕು. ಇದು ರಸ್ತೆಗಿಂತ ಸ್ವಲ್ಪ ಎತ್ತರವಾಗಿರಬೇಕು. ಇದು ಏಳಿಗೆ, ಅಭಿವೃದ್ಧಿಗೆ ಪೂರಕ. ರಸ್ತೆಗಿಂತ ತಳಮಟ್ಟದಲ್ಲಿದ್ದರೆ ಆದಾಯದಲ್ಲಿ ಕೊರತೆ, ನೆಗೆಟಿವ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಾಸ್ತು ಪ್ರಕಾರ ಹೀಗೆ ಇರಬಾರದು.

ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ. ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು. ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ.

ದೇವರ ಕೋಣೆಯಲ್ಲಿ ಒಂಟಿ ದೀಪ ಊರಿಸಬಾರದು ಸಣ್ಣ ದೀಪವಾದರೂ ಅಡ್ಡಿಯಿರಿ ಇಲ್ಲ ಎರಡೂ ದೀಪಗಳನ್ನು ಇಡಿ. ಒಂಟಿ ದೀಪ ಅಂಟಿಸುವುದು ಶವದ ಮುಂದೆ. ಹಾಗಾಗಿ ದೇವರಿಗೆ ಯಾವಾಗಲೂ ಎರಡು ದೀಪ ಇಟ್ಟು ಬೆಳಗಬೇಕು.

ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು. ಚಾಪೆಯನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದರೆ ಮಡಚಿ ಒಂದು ಕಡೆ ಇಡಬೇಕು.

ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು. ಇದರಿಂದ ಮನೆಯಲ್ಲಿನ ಲಕ್ಷ್ಮಿಯನ್ನು ಹೊರಗೆ ಹಾಕಿದಂತೆ. ಸಾಮಾನ್ಯವಾಗಿ ಸಂಜೆ ಹೊತ್ತು ಮನೆ ಮುಂದೆ ಗುಡಿಸಿ ನೀರಿನಿಂದ ಹೊಸಿಲು ತೊಳೆದು ಶುಭ್ರಗೊಳಿಸಿದರೆ ಲಕ್ಷ್ಮೀ ಬರುತ್ತಾಳೆ ಎಂಬ ನಂಬಿಕೆ ಇದೆ.

ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕನಿಷ್ಠ ಅರಿಶಿನ-ಕುಂಕುಮ ಹಾಕಿದ ನಂತರ ಧರಿಸುವುದು ಒಳ್ಳೆಯದು. ಯಾಕೆಂದರೆ ಬಟ್ಟೆ ಹೊಸದಾಗಿದ್ದರೂ ಎಲ್ಲಿ ಇಟ್ಟಿರುತ್ತಾರೋ, ಯಾರು ಬಳಸಿರುತ್ತಾರೋ ಎಂಬುದು ತಿಳಿದಿರುವುದಿಲ್ಲ.

ಕುಲದೇವರಿಗೆ ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ.

ಜೇಡರ ಬಲೆ ಮನೆಯಲ್ಲಿ ಕಟ್ಟಿದರೆ ತಕ್ಷಣ ನಿವಾರಿಸಿ. ಅದು ಅಶುಭ ತರುವ ಸಂಕೇತ ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ. ಅಷ್ಟು ದೈವಿಕ ಕಳೆ ವೃದ್ಧಿಸುವುದು. ಸಾಮಾನ್ಯವಾಗಿ ಜೇಡ ಕಟ್ಟುವುದು ಖಾಲಿ ಇರುವ ಅಥವಾ ಪಾಳುಬಿದ್ದ ಮನೆಗಳಲ್ಲಿ ಮಾತ್ರ.

ಮನೆಯ ಯಾವುದೇ ಜಾಗದಲ್ಲಿ ಅಥವಾ ಕಾಂಪೌಂಡ್ ಒಳಗೆ ಪಾರಿವಾಳಗಳು ಮನೆ ಮಾಡಿದರೆ ಅದು ಕಷ್ಟಗಳು ಎದುರಾಗುವ ಸಂಕೇತ. ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸುವುದು ಒಳ್ಳೆಯದು.

ಜೇನುಗೂಡು ಮನೆಯಲ್ಲಿ ಅಥವಾ ಕಟ್ಟಡದ ಯಾವುದೇ ಮೂಲೆಯಲ್ಲಿ ಕಟ್ಟಬಾರದು, ಜೇನುಗಳಿಗೆ ಹಾನಿ ಆಗದಂತೆ ಅದನ್ನು ತೆರವು ಮಾಡಿ. ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ.

ಬಾವಲಿಗಳು ಮನೆ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರ ವಹಿಸಿ. ಬಾವಲಿಗಳು ದಾರಿದ್ರ್ಯದ ಲಕ್ಷಣ ಎಂದು ನಂಬಲಾಗುತ್ತದೆ.

ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ ಅವರದ್ದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ.

ಉತ್ತರ ದಿಕ್ಕಿನಲ್ಲಿ ತಲೆ ಮಾಡಿ ಮಲಗಬಾರದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು.

ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದಾಗಲಿ ಮಾಡಬಾರದು. ಇದು ದಾರಿದ್ರ್ಯದ ಲಕ್ಷಣಗಳಾಗಿದ್ದು, ಇಲ್ಲದೇ ಇದ್ದರೂ ಬರುವ ಸಾಧ್ಯತೆ ಇದೆ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿ ಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ನಿರ್ಮಾಣವಾಗುತ್ತದೆ.

ಆಗ್ನೇಯ ದಿಕ್ಕಿನಲ್ಲಿ ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೆಯ ದಿಕ್ಕಿನಲ್ಲಿ ಗ್ಯಾಸ್ ಸ್ವಟ್ ಅನ್ನಾದರೂ ಇಡಬೇಕು.

ಅಡುಗೆ ಮನೆಯಲ್ಲಿ ಔಷಧಗಳನ್ನು ಇಡಬೇಡಿ. ನೆಗೆಟಿವ್ ಎನರ್ಜಿ ಒಕ್ಕರಿಸುವ ಅಪಾಯವಿರುತ್ತದೆ.

ಆಹಾರ ಸೇವಿಸಿದ ನಂತರ ಎಂಜಲು ಮುಸುರೆಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೇ ಇಡಬೇಡಿ. ಊಟ ಮಾಡಿದ ನಂತರ ತಟ್ಟೆಯಲ್ಲಿ ನೀರು ಹಾಕಿ ಇಡಿ. ತಟ್ಟೆ, ಪಾತ್ರೆಗಳು ಒಣಗಲು ಬಿಡಬೇಡಿ. ಊಟದ ನಂತರ ಕೂಡಲೇ ಕೈ ತೊಳೆಯಿರಿ. ಕೈ ಕೂಡ ಒಣಗದಂತೆ ನೋಡಿಕೊಳ್ಳಿ. ಊಟದ ನಂತರ ನೆಲದ ಮೇಲೆ ಬಿದ್ದ ಎಂಜಲು ಅನ್ನ ತಟ್ಟೆಯಲ್ಲಿ ಹಾಕಬೇಡಿ.

ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾರೆ ರಾತ್ರಿ ಸಮಯದಲ್ಲಿ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ. ರಾತ್ರಿ ಹೊತ್ತಲ್ಲಿ ಕನ್ನಡಿ ನೋಡುವುದು ಒಳ್ಳೆಯದಲ್ಲ. ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆಯದೇ ನಿಮ್ಮ ಮುಖ ನೋಡಿಕೊಳ್ಳಬೇಡಿ.

ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ.

ವರ್ಷಕ್ಕೆ ಒಮ್ಮೆಯಾದರೂ (ಅತಿಥಿ ಸತ್ಕಾರ) ಪೂಜೆ ಮಾಡಿ ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ.

ವರ್ಷಕ್ಕೆ ಒಮ್ಮೆಯಾದರೂ ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ, ಇದರಿಂದ ಮನೆ ದೇವರ ಶಾಪ, ಕೋಪ ಶಮನ ಆಗಿ ನಿಮ್ಮ ಕೆಲಸಗಳಿಗೆ ನೆರವಾಗುತ್ತದೆ.

ಸ್ನಾನವಿಲ್ಲದೇ ಊಟ ಮಾಡುವುದು ಒಳ್ಳೆಯದಲ್ಲ,. ಏಕೆಂದರೆ ಅನ್ನುವು ದೇವರಿಗೆ ಸಮಾನ. ಕನಿಷ್ಠ ಕೈ-ಕಾಲು ಮುಖ ತೊಳೆದುಕೊಳ್ಳಿ. ಊಟಕ್ಕೆ ಮುನ್ನ ಕೈ-ಕಾಲು ತೊಳೆದುಕೊಳ್ಳುವುದು ಒಳ್ಳೆಯದು.

ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ ತಾನಾಗಿಯೇ ಮನೆಯಲ್ಲಿ ಶಾಂತಿ-ನೆಮ್ಮದಿ ಸಿಗುತ್ತದೆ. ಜೀವನದಲ್ಲಿ ಶಿಸ್ತು, ಬದ್ಧತೆ, ನಿಯಮ ಅಳವಡಿಸಿಕೊಳ್ಳದೇ ಇದ್ದರೆ ಯಶಸ್ಸು ದೂರವಾಗುತ್ತದೆ.

ದಾನ ಮಾಡುವಾಗಲೂ ಯೋಗ್ಯರಿಗೆ ಮಾತ್ರ ನೀಡಬೇಕು. ಅಪಾತ್ರರಿಗೆ ನೀಡಿದರೆ ದಾನ ಒಳ್ಳೆಯದಲ್ಲ. ನಿಜವಾಗಲೂ ಕಷ್ಟದಲ್ಲಿ ಇದ್ದವರಿಗೆ ದಾನ ಮಾಡಿದರೆ ಅದರಿಂದ ಸಾರ್ಥಕವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments