Saturday, October 19, 2024
Google search engine
Homeಕ್ರೀಡೆಐಪಿಎಲ್ ನಲ್ಲಿ ಯಾವ ಟೀಂ ಸೇರ್ತಿರಾ ಗುರುವೇ? ಆರ್ ಸಿಬಿ ಅಭಿಮಾನಿ ಪ್ರಶ್ನೆಗೆ ರೋಹಿತ್ ಪ್ರತಿಕ್ರಿಯೆ...

ಐಪಿಎಲ್ ನಲ್ಲಿ ಯಾವ ಟೀಂ ಸೇರ್ತಿರಾ ಗುರುವೇ? ಆರ್ ಸಿಬಿ ಅಭಿಮಾನಿ ಪ್ರಶ್ನೆಗೆ ರೋಹಿತ್ ಪ್ರತಿಕ್ರಿಯೆ ಹೀಗಿತ್ತು!

ಭಾರತ ತಂಡದ ನಾಯಕ ರೋಹಿತ್ ಶರ್ಮ ಐಪಿಎಲ್ ಟಿ-20 ಟೂರ್ನಿಯಲ್ಲಿ ಈ ಬಾರಿ ಯಾವ ತಂಡದ ಪರ ಆಡಲಿದ್ದಾರೆ ಎಂಬ ಪ್ರಶ್ನೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಐಪಿಎಲ್ ಟಿ-20 ಟೂರ್ನಿಯಲ್ಲಿ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಆಗಬೇಕಿದೆ. ಈ ನಡುವೆ 5 ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟ ರೋಹಿತ್ ಶರ್ಮ ಯಾವ ತಂಡಕ್ಕೆ ಹೋಗುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮ ಅವರನ್ನು ಉಳಿಸಿಕೊಂಡಿದೆ ಎಂಬ ವರದಿಗಳು ಇದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಲಸೆ ಹೋಗುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಆದರೆ ಯಾವ ತಂಡಕ್ಕೆ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಇದೇ ಪ್ರಶ್ನೆಯನ್ನು ರೋಹಿತ್ ಶರ್ಮ ಅವರನ್ನು ಕೇಳಿದ್ದು, ಈ ವೀಡಿಯೋ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಮಳೆಯ ನಡುವೆ ಬೌಂಡರಿ ಗೆರೆಯ ಬಳಿ ನಡೆದುಹೋಗುತ್ತಿದ್ದ ರೋಹಿತ್ ಶರ್ಮ ಅವರನ್ನು ಆರ್ ಸಿಬಿ ಅಭಿಮಾನಿಯೊಬ್ಬ ಭಾಯ್, ಐಪಿಎಲ್ ನಲ್ಲಿ ಯಾವ ತಂಡ? (ಅಣ್ಣಾ.. ಐಪಿಎಲ್ ನಲ್ಲಿ ಈ ಬಾರಿ ಯಾವ ತಂಡ) ಎಂದು ಪ್ರಶ್ನಿಸಿದ್ದಾರೆ.

ಕೌನ್ಸಾ ಟೀಂ ಚಾಯಿಯೆ ಬೊಲೊ (ಯಾವ ತಂಡ ಬೇಕು) ಎಂದು ರೋಹಿತ್ ಶರ್ಮ ಮರು ಪ್ರಶ್ನಿಸಿದ್ದಾರೆ.

ಭಾಯ್ ಆರ್ ಸಿಬಿ ಆಜಾವೊ (ಅಣ್ಣಾ ಆರ್ ಸಿಬಿಗೆ ಬಂದುಬಿಡಿ) ಎಂದು ಅಭಿಮಾನಿ ಆಹ್ವಾನಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡದ ರೋಹಿತ್ ಶರ್ಮ ನಡೆದುಕೊಂಡು ಹೋಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments