Wednesday, November 13, 2024
Google search engine
Homeಅಪರಾಧಬೆಂಗಳೂರು ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್: ನಟ ದುನಿಯಾ ವಿಜಯ್ ಜೈಲಿಂದ ಬಿಡುಗಡೆ ಮಾಡಸಿದ್ದ ಆರೋಪಿಯಿಂದಲೇ...

ಬೆಂಗಳೂರು ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್: ನಟ ದುನಿಯಾ ವಿಜಯ್ ಜೈಲಿಂದ ಬಿಡುಗಡೆ ಮಾಡಸಿದ್ದ ಆರೋಪಿಯಿಂದಲೇ ಕೃತ್ಯ!

ಬೆಂಗಳೂರಿನ ಹೊರವಲಯವಾದ ಬಾಗಲೂರಿನ ಶೆಡ್ ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ನಟ ದುನಿಯಾ ವಿಜಯ್ ಮಾನವೀಯ ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡಿದ್ದ ಆರೋಪಿಯೇ ಕೊಲೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಈ ಹಿಂದೆ ಡಬಲ್ ಮರ್ಡರ್ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಸುರೇಶ್ ನನ್ನು ದುನಿಯಾ ವಿಜಯ್ ಶ್ಯೂರಿಟಿ ಹಣ ನೀಡಿ ಜೈಲಿಂದ ಬಿಡುಗಡೆ ಮಾಡಿಸಿದ್ದರು. ಇದೇ ಸುರೇಶ್ ಇದೀಗ ಮತ್ತೊಂದು ಡಬಲ್ ಮರ್ಡರ್ ಮಾಡಿ ಜೈಲುಪಾಲಾಗಿದ್ದಾನೆ.

ಬಾಗಲೂರು ಶೆಡ್ ನಲ್ಲಿ ಖಾಸಗಿ ಟ್ರಾವೆಲ್ಸ್ ಕಂಪನಿಯ ಬಸ್ ಕೆಲಸಗಾರರಾಗಿದ್ದ ನಾಗೇಶ್ ಮತ್ತು ಮಂಜುನಾಥ್ ಕೊಲೆ ಪ್ರಕರಣದಲ್ಲಿ ಸುರೇಶ್ ನನ್ನು ಬಂಧಿಸಲಾಗಿದೆ.

ಜೈಲಿಂದ ಬಿಡುಗಡೆ ಬಳಿಕ ಮಾರ್ಕೆಟ್ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಸುರೇಶ್ ಜೀವನ ನಡೆಸುತ್ತಿದ್ದ. ಸುರೇಶ್ ಸಂಬಂಧಿಯ ಸಹಾಯದಿಂದ ಶೆಡ್ನಲ್ಲಿ ಕೆಲಸ ಗಿಟ್ಟಿಸಿದ್ದ. ಗುಜರಿ ಮಾರುವ ವಿಚಾರಕ್ಕೆ ಗಲಾಟೆ ಆದಾಗ ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಅಂತಾ ಹೀಯಾಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಸುರೇಸ್ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments