ವಾಷಿಂಗ್ಟನ್: ಕೋವಿಡ್ ಸಂದರ್ಭದಲ್ಲಿ ಅನುಸರಿಸಲಾದ ಸಾಮಾಜಿಕ ಅಂತರ, ಮುಸುಕು ಧರಿಸುವುದು ಅವೈಜ್ಞಾನಿಕವಾಗಿದ್ದು ಕೊರೊನಾ ಲಸಿಕೆ ಕ್ರಮಗಳು ಅತಿಯಾಗಿತ್ತು ಎಂದು ಅಮೆರಿಕದ ಸಂಸದೀತ ಸಮಿತಿ ವರದಿ ಹೇಳಿದೆ.
ಕೋವಿಡ್ ಸೋಂಕು ಸೃಷ್ಟಿಗೆ ಚೀನಾದ ಪ್ರಯೋಗಾಲಯವೇ ಕಾರಣ ಎಂಬುದನ್ನು ದೃಢೀಕರಿಸಿರುವ ಈ ವರದಿ, ಅದನ್ನು ತಡೆಯುವ ಸಲುವಾಗಿ ಹಾಕಲಾದ ಲಸಿಕೆಗಳು ಕೂಡ ಜನರ ದಿಕ್ಕು ತಪ್ಪಿಸುವಂತಹದ್ದು ಎಂದು ಅಭಿಪ್ರಾಯಪಟ್ಟಿದೆ.
ಅಮೆರಿಕದ ಕಾಂಗ್ರೆಸ್ ವರದಿಯು ಕೋವಿಡ್ ತಗ್ಗಿಸುವ ಕ್ರಮಗಳ ಬಗ್ಗೆ ಜಗತ್ತಿನ ಸರ್ಕಾರಗಳನ್ನು ದೂಷಿಸಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವು ವೈಜ್ಞಾನಿಕ ತಳಹದಿ ಇಲ್ಲದ ಕ್ರಮಗಳಾಗಿತ್ತು ಎಂದಿದೆ.
ಇದೇ ವೇಳೆ ದೀರ್ಘಕಾಲದ ಲಾಕ್‌ಡೌನ್‌ಗಳು ಜಾಗತಿಕ ಆರ್ಥಿಕತೆಗೆ ಮಾತ್ರವಲ್ಲ, ಅಮೆರಿಕನ್ನರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಅಳೆಯಲಾಗದ ಹಾನಿಯನ್ನುಂಟು ಮಾಡಿವೆ.
ವಿಶೇಷವಾಗಿ ಯುವ ನಾಗರಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಅಮರಿಕದ ಸಂಸದೀಯ ಸಮಿತಿಯ ಅಚಿತಿಮ ವರದಿ ಹೇಳಿದೆ.
ಕರೋನ ವೈರಸ್ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಇಂತಹ ಶಿಫಾರಸುಗಳನ್ನು ಮಾಡಲಾಗಿದೆ. ವಿಜ್ಞಾನವು ಬೆಳೆದಂತೆ ಮಾರ್ಗಸೂಚಿಗಳು ಬದಲಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಆದಾಗ್ಯೂ, ಸಾಂಕ್ರಾಮಿಕ ರೋಗದ ಆರಂಭದಲ್ಲಿ ಟ್ರಂಪ್ ಆಡಳಿತವು ಸ್ಥಾಪಿಸಿದ ಪ್ರಯಾಣ ನಿರ್ಬಂಧಗಳನ್ನು ವರದಿಯು ಶ್ಲಾಘಿಸಿದೆ. ಅವು ಜೀವ ಉಳಿಸಲು ಸಹಾಯ ಮಾಡಿದವು ಎಂದು ಅಭಿಪ್ರಾಯಪಟ್ಟಿದೆ.
ಚೀನಾದ ವುಹಾನ್ ಪಟ್ಟಣದಲ್ಲ್ಲಿ ಪ್ರಯೋಗಾಲಯದಲ್ಲಿ ಸಂಭವಿಸಿದ ಅಪಘಾತದ ಪರಿಣಾಮವಾಗಿ ಈ ವೈರಸ್ ಹೆಚ್ಚಾಗಿ ಕಂಡುಬಂದಿದೆ ಎಂದು ಎರಡು ವರ್ಷಗಳ ಸಂಶೋಧನೆಯ ನಂತರ ಸಿದ್ಧಪಡಿಸಲಾದ ೫೨೦೦ ಪುಟಗಳ ವರದಿ ತಿಳಿಸಿದೆ.
ಈ ವರದಿಯ ಮುಖ್ಯಾಂಶಗಳು
ವಿಶ್ವ ನಾಯಕರು ಶಿಫಾರಸು ಮಾಡಿದ “6 ಅಡಿ” ಸಾಮಾಜಿಕ ಅಂತರಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ;
ಇನ್ನೂ ಆತಂಕಕಾರಿ ಸಂಗತಿಯೆಂದರೆ, ವೈರಸ್ ಹರಡುವುದನ್ನು ನಿಯಂತ್ರಿಸುವಲ್ಲಿ ಸಾಮಾಜಿಕ ಅಂತರ, ಮುಸುಕುಗಳು ಪರಿಣಾಮಕಾರಿಯಾಗಿವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ;
ಸರ್ಕಾರವು ನಿಜಸ್ಥಿತಿ ಹೇಳದೇ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿತು, ಪ್ರಯೋಗಾಲಯ ಅಪಘಾತ ಸಿದ್ಧಾಂತವನ್ನು ಪಿತೂರಿಯ ವಾದ ಎಂಬಂತೆ ಬಿಂಬಿಸಿತು.
ಕೋವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಲಾದ ಲಸಿಕೆಗಳ ಪರಿಣಾಮವನ್ನು ಉತ್ಪ್ರೇಕ್ಷೆ ಮಾಡಲಾಗಿದೆ.