Saturday, November 9, 2024
Google search engine
Homeತಾಜಾ ಸುದ್ದಿಫ್ರಾನ್ಸ್ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಭಾರೀ ಮುನ್ನಡೆ, ಭುಗಿಲೆದ್ದ ಹಿಂಸಾಚಾರ

ಫ್ರಾನ್ಸ್ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಭಾರೀ ಮುನ್ನಡೆ, ಭುಗಿಲೆದ್ದ ಹಿಂಸಾಚಾರ

ಫ್ರಾನ್ಸ್ ಸಾರ್ವತ್ರಿಕ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆದ್ದು ಮುನ್ನಡೆ ಸಾಧಿಸಿದ್ದರಿಂದ ರಾಜಧಾನಿ ಪ್ಯಾರಿಸ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಸಂಸದೀಯ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಎಡಪಕ್ಷಗಳ ಮೈತ್ರಿಕೂಟ ಮುನ್ನಡೆ ಸಾಧಿಸಿದರೆ, ಬಲಪಂಥೀಯ ಪಕ್ಷಗಳು ಮೂರನೇ ಸ್ಥಾನಕ್ಕೆ ಕುಸಿದು ಆಘಾತಕ್ಕೆ ಒಳಗಾಗಿದೆ.

ಆಡಳಿತಾರೂಢ ಎಮ್ಯಾನುಯೆಲ್ ಮಾರ್ಕೊನ್ ನೇತೃತ್ವದ ಪಕ್ಷ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಯಾವುದೇ ಪಕ್ಷಕ್ಕೆ ಬಹುಮತ ಪಡೆಯಲು ವಿಫಲವಾಗಿದೆ.

ಎಡಪಕ್ಷಗಳ ಮೈತ್ರಿಕೂಟ 184ರಿಂದ 198 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, 577 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಬಹುಮತ ಪಡೆಯಲು 289 ಸ್ಥಾನಗಳು ಬೇಕಾಗಿದೆ. ಮಾರ್ಕೊನ್ಸ್ ಸೆಂಟ್ರರಿಸ್ಟ್ ಪಾರ್ಟಿ 160-169 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದ್ದರೆ, ಬಲಪಂಥೀಯ ಪಕ್ಷಗಳು 135-143 ಸ್ಥಾನಗಳಿಗೆ ಕುಸಿದಿವೆ.

ಎಡಪಕ್ಷಗಳ ಬೆಂಬಲಿತರು ಪ್ಯಾರಿಸ್ ನಲ್ಲಿ ಸಭೆ ಸೇರಿ ಸಂಭ್ರಮ ಆಚರಿಸುತ್ತಿದ್ದ ಹಿನ್ನೆಲೆಯಲ್ಲಿ ಘರ್ಷಣೆ ಆರಂಭವಾಗಿದ್ದು, ಹಿಂಸಾಚಾರಕ್ಕೆ ತಿರುಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಿಂಸಾಚಾರದಲ್ಲಿ ಹಲವು ಕಟ್ಟಡಳಿಗೆ ಹಾನಿಯಾಗಿದ್ದು, ವಾಹನಗಳು ಧ್ವಂಸಗೊಂಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments