Saturday, July 6, 2024
Google search engine
Homeತಾಜಾ ಸುದ್ದಿರಾಜಕೀಯಕ್ಕೆ ಯೂಸೂಫ್ ಪಠಾಣ್ ಎಂಟ್ರಿ: ಟಿಎಂಸಿಯಿಂದ ಸ್ಪರ್ಧೆ

ರಾಜಕೀಯಕ್ಕೆ ಯೂಸೂಫ್ ಪಠಾಣ್ ಎಂಟ್ರಿ: ಟಿಎಂಸಿಯಿಂದ ಸ್ಪರ್ಧೆ

ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಿಂದ ಲೋಕಸಭೆಗೆ ಸ್ಪರ್ಧಿಸುವ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.

ಪಶ್ಚಿಮ ಬಂಗಾಳದಿಂದ ಸ್ಪರ್ಧಿಸುವ 42 ಸ್ಪರ್ಧಿಗಳ ಪೈಕಿ ಭಾರತ ತಂಡದ ಮಾಜಿ ಆಲ್ ರೌಂಡರ್ ಯೂಸೂಫ್ ಪಠಾಣ್ ಕೂಡ ಸ್ಥಾನ ಪಡೆದಿದ್ದಾರೆ. ಈ ಮೂಲಕ ಯೂಸೂಫ್ ಪಠಾಣ್ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.

ಯೂಸೂಫ್ ಪಠಾಣ್ ಬಹರಂಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಲ್ಲಿ ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ ಸ್ಪರ್ಧಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments