ನವದೆಹಲಿ: ಭಾರತಿ ಎಂಟರ್ ಪ್ರೈಸಸ್ ಅಂಗವಾಗಿರುವ ಭಾರತಿ ಏರ್‌ಟೆಲ್ ಫೌಂಡೇಶನ್ ತನ್ನ 25 ವರ್ಷಗಳ ಸ್ಮರಣಾರ್ಥವಾಗಿ ಪ್ರತಿಷ್ಠಿತ ‘ಭಾರತಿ ಏರ್‌ಟೆಲ್ ವಿದ್ಯಾರ್ಥಿ ವೇತನ ಯೋಜನೆ’ಯನ್ನು ಆರಂಭಿಸುತ್ತಿದೆ.
ಮೆರಿಟ್ ಆಧಾರಿತ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನಲೆಯಿಂದ ಬಂದಿರುವ ಅರ್ಹ ವಿದ್ಯಾರ್ಥಿಗಳಿಗೆ ಬೆಂಬಲಿಸಲು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸುತ್ತಾ, ಐಐಟಿಗಳನ್ನೂ ಒಳಗೊಂಡಂತೆ ಉನ್ನತ 50 ರಾಷ್ಟ್ರೀಯ ಸಾಂಸ್ಥಿಕ ಶ್ರೇಣೀಕರಣ ಚೌಕಟ್ಟಿನಲ್ಲಿರುವ (NIRF) (ಇಂಜಿನಿಯರಿಂಗ್) ಕಾಲೇಜುಗಳಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಜಿ, ಸುರತ್ಕಲ್ ಸಹ ಸೇರಿದೆ.ತಂತ್ರಜ್ಞಾನ ಆಧಾರಿತ ಇಂಜಿನಿಯರಿಂಗ್ ಯುಜಿ ಮತ್ತು ಸಮಗ್ರ ಯೋಜನೆಗಳ (5 ವರ್ಷಗಳವರೆಗೆ) ಶಿಕ್ಷಣವನ್ನು ನೀಡಲು ಉದ್ದೇಶಿಸಿದೆ.
ಆಗಸ್ಟ್ 2024ರ ಕಾಲೇಜು ದಾಖಲಾತಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಈ ವರ್ಷ 250 ವಿದ್ಯಾರ್ಥಿಗಳೊಂದಿಗೆ ಆರಂಭವಾಗುವ ಈ ಯೋಜನೆಯು ಪ್ರತಿ ಗುಂಪಿನ ಮೂಲಕ ಅದರ ಯಶಸ್ವಿ ಅನುಷ್ಠಾನದೊಂದಿಗೆ ಏರಿಕೆ ಕಾಣುವಂತೆ ವಿನ್ಯಾಸಗೊಳಿಸಿದೆ. ಕಾರ್ಯಕ್ರಮವು ತನ್ನ ಉತ್ತುಂಗವನ್ನು ಏರಿದಾಗ ವರ್ಷಕ್ಕೆ 100 ಕೋಟಿ ರೂ.ಗೂ ಅಧಿಕ ದೇಣಿಗೆಯೊಂದಿಗೆ 4,000 ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಹಿಂದುಳಿದ, ಆರ್ಥಿಕ ಸಮಸ್ಯೆಯ ಹಿನ್ನಲೆಯಿಂದ ಬಂದಿರುವ ಪ್ರತಿಭಾವಂತ ಮೆರಿಟ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗಿರುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಈ ಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ಕಲ್ಪಿಸಲಾಗಿದೆ. ಈ ವಿದ್ಯಾರ್ಥಿವೇತನವನ್ನು ವಾರ್ಷಿಕವಾಗಿ 8.5 ಲಕ್ಷ ರೂ.ಗಳನ್ನು ಮೀರದ ಕೌಟುಂಬಿಕ ಆದಾಯವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಭಾರತಿ ಏರ್‌ಟೆಲ್ ವಿದ್ಯಾರ್ಥಿ ವೇತನಗಳು ಉನ್ನತ 50 NIRF(ಇಂಜಿನಿಯರಿಂಗ್) ಕಾಲೇಜುಗಳಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಟೆಲಿಕಾಂ, ಇನ್ಫಾರ್ಮಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ(ಎಐ, ಐಓಟಿ, ಎಆರ್/ವಿಆರ್, ಮಷೀನ್ ಕಲಿಕೆ, ರೊಬೊಟಿಕ್ಸ್) ಕ್ಷೇತ್ರಗಳಲ್ಲಿನ ಯುಜಿ ಮತ್ತು ಸಮಗ್ರ ಕೋರ್ಸುಗಳ ಮೇಲೆ ಗಮನ ಹರಿಸುತ್ತದೆ.
ವಿದ್ಯಾರ್ಥಿವೇತನದ ಲಾಭಾರ್ಥಿಗಳನ್ನು ‘ಭಾರತಿ ವಿದ್ವಾಂಸರು’ ಎಂದು ಕರೆಯಲಾಗುತ್ತದೆ. ಇವರು ತಮ್ಮ ಕೋರ್ಸಿನ ಅವಧಿಯುದ್ದಕ್ಕೂ ತಮ್ಮ ಕಾಲೇಜು ಶುಲ್ಕಗಳ 100%ರಷ್ಟು ಹಣವನ್ನು ಸ್ವೀಕರಿಸುತ್ತಾರೆ ಮತ್ತು ಜೊತೆಗೆ ಒಂದು ಲ್ಯಾಪ್ಟಾಪ್ ಸಹ ಪಡೆಯುತ್ತಾರೆ. ಹೆಚ್ಚುವರಿಯಾಗಿ, ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮತ್ತು ಮೆಸ್ ಶುಲ್ಕಗಳನ್ನು ಸಹ ಭರಿಸಲಾಗುತ್ತದೆ. ಗುಣಮಟ್ಟದ ಉನ್ನತ ಶಿಕ್ಷಣವನ್ನು ಸಕ್ರಿಯಗೊಳಿಸುವ ಮೂಲಕ ಸಿಗುವ ಪ್ರಯೋಜನಗಳು ದೀರ್ಘಕಾಲಿಕವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಮೂಲ ತತ್ವಶಾಸ್ತ್ರದೊಂದಿಗೆ, ಭಾರತಿ ವಿದ್ವಾಂಸರು ಒಮ್ಮೆ ಅವರು ಪದವಿ ಪಡೆದ ತರುವಾಯ, ಉದ್ಯೋಗ ಪಡೆದ ನಂತರ ಸ್ವಯಂಪ್ರೇರಿತವಾಗಿ ಕನಿಷ್ಠ 1 ವಿದ್ಯಾರ್ಥಿಗೆ ಬೆಂಬಲಿಸುವುದನ್ನು ಉತ್ತೇಜಿಸುತ್ತದೆ. ಈ ಬದಲಾವಣೆಯುಳ್ಳ ದೃಢ ಸಂಕಲ್ಪವುಳ್ಳ ಉಪಕ್ರಮವು ಯುವ ಜನರ ಜೀವನವನ್ನು ರೂಪುಗೊಳಿಸುತ್ತದೆ ಮತ್ತು ಭಾರತದ ಹಣಕಾಸಿನ ಅವಕಾಶಗಳಲ್ಲಿ ಮತ್ತು ಬೆಳವಣಿಗೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ.
ಭಾರತಿ ಏರ್‌ಟೆಲ್ ಫೌಂಡೇಶನ್ ನ ಸಹ-ಸಂಸ್ಥಾಪಕರು ಮತ್ತು ಭಾರತಿ ಎಂಟರ್ಪ್ರೈಸಸ್ ನ ಉಪಾಧ್ಯಕ್ಷರೂ ಆಗಿರುವ ರಾಕೇಶ್ ಭಾರತಿ ಮಿತ್ತಲ್ ಮಾತನಾಡಿ, ಭಾರತಿ ಏರ್‌ಟೆಲ್ ಫೌಂಡೇಶನ್ ತನ್ನ ಶೈಕ್ಷಣಿಕ ಉಪಕ್ರಮಗಳ ಮೂಲಕ ಇದುವರೆಗೆ 6 ದಶಲಕ್ಷಕ್ಕೂ ಹೆಚ್ಚಿನ ಜೀವನಗಳನ್ನು ರೂಪಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಈ ಮಂಚೂಣಿ ಭಾರತಿ ಏರ್‌ಟೆಲ್ ವಿದ್ಯಾರ್ಥಿ ವೇತನ ಯೋಜನೆಯೊಂದಿಗೆ, ನಾವು ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನಲೆಗಳಿಂದ ಬಂದಿರುವ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಶೈಕ್ಷಣಿಕ ಅತ್ಯುತ್ತಮತೆಯನ್ನು ಸಾಧಿಸಲು ಮತ್ತು ತಮ್ಮ ಕನಸುಗಳನ್ನು ನನಸಾಗಿಸುವುದನ್ನು ಸಶಕ್ತಗೊಳಿಸುವ ನಮ್ಮ ಬದ್ಧತೆಯನ್ನು ವಿಸ್ತರಿಸುತ್ತಿದ್ದೇವೆ ಎಂದರು.