1975ರಲ್ಲಿ ಜಾರಿಗೆ ತರಲಾಗಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಸತ್ ನಲ್ಲಿ ಮಾಡಿದ್ದೆಲ್ಲವೂ ಸರಿಯಲ್ಲ ಅಥವಾ ಶೂನ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ತುರ್ತು ಪರಿಸ್ಥಿತಿ ಹೇರಿಕೆ ವೇಳೆ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾದ ’ಸಮಾಜವಾದ’ ಮತ್ತು ‘ಜಾತ್ಯಾತೀತ’ ಮತ್ತು ‘ಬದ್ಧತೆ’ ಪದಕಗಳ ಸೇರ್ಪಡೆ ಪ್ರಶ್ನಿಸಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿದೆ.
ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯ ನವೆಂಬರ್ ೨೫ಕ್ಕೆ ತೀರ್ಪು ಪ್ರಕಟಿಸಿದೆ. ಅಲ್ಲದೇ ಅರ್ಜಿದಾರರು ಈ ಆದೇಶವನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯಕ್ಕೆ ಸಲ್ಲಿಸುವ ಅವಕಾಶವನ್ನು ನಿರಾಕರಿಸಿದೆ.
1976ರಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಸಂವಿಧಾನದ ಮೂಲ ಪ್ರತಿಯಲ್ಲಿ ಇಲ್ಲದ ಸಮಾಜವಾದ, ಜಾತ್ಯಾತೀತ ಮತ್ತು ಬದ್ಧತೆ ಪದಕಗಳನ್ನು ಸಂಸತ್ ನಲ್ಲಿ ಸಂವಿಧಾನ ಪೀಠಿಕೆಯಲ್ಲಿ ಸೇರಿಸಲಾಯಿತು.
ಸಂವಿಧಾನದ ೪೨ನೇ ಪರಿಚ್ಛೇದದಲ್ಲಿ ಇಲ್ಲದ ಈ ಪದಗಳನ್ನು ಸೇರಿಸುವ ಮೂಲಕ ದೇಶದ ಮೇಲೆ ಭಾರೀ ಪರಿಣಾಮ ಬೀರಿದ್ದು, ಇಡೀ ಚಿತ್ರಣವನ್ನೇ ಬದಲಾಯಿಸಿದೆ.
ವಿಚಾರಣೆ ವೇಳೆ ಸುಬ್ರಹ್ಮಣ್ಯ ನಾಯ್ದು ಪರ ವಕೀಲರು ೯ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಹಿಂದೆ ನೀಡಿದ್ದ ತೀರ್ಪು ಗೊಂದಲದಿಂದ ಕೂಡಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಸಮಾಜವಾದ ವಾದ ಅಂದರೆ ಅದನ್ನು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪರಿಗಣಿಸಲಾಗುವುದಿಲ್ಲ. ಅದರ ಉದ್ದೇಶ ಸಂಪತ್ತನ್ನು ಸಮಾನವಾಗಿ ಹಂಚುವುದು ಎಂಬುದನ್ನು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.