Thursday, December 25, 2025
Google search engine
Homeಕಾನೂನುಹನಿಟ್ರ್ಯಾಪ್ ವಿಚಾರಣೆ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಹನಿಟ್ರ್ಯಾಪ್ ವಿಚಾರಣೆ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ದೇಶಾದ್ಯಂತ ಕುತೂಹಲ ಕೆರಳಿಸಿರುವ ಹನಿಟ್ರ್ಯಾಪ್ ವಿಚಾರಣೆಗೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್​​ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.

ಅಲ್ಲದೇ ಹನಿಟ್ರ್ಯಾಪ್ ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದ ಅರ್ಜಿದಾರ ವಕೀಲರನ್ನು ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿಕ್ರಮ್‌ನಾಥ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ, ಜೊತೆಗೆ ಅಲ್ಲದೇ ವಿಚಾರಣೆ ವೇಳೆ ಜಾರ್ಖಂಡ್ ಅರ್ಜಿದಾರ ಬಿನಯ್ ಕುಮಾರ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದು ಕರ್ನಾಟಕಕ್ಕೂ ನಿಮಗೂ ಏನು ಸಂಬಂಧ ಎಂದು ಚಾಟಿ ಬೀಸಿದೆ.

ಅರ್ಜಿದಾರರಾದ ನೀವು ಜಾರ್ಖಂಡ್ ಮೂಲದವರು, ಕರ್ನಾಟಕಕ್ಕೂ ನಿಮಗೂ ಏನು ಸಂಬಂಧ, ರಾಜಕೀಯ ನಾನ್‌ಸೆನ್ಸ್‌ಗಳನ್ನು ವಿಚಾರಣೆ ನಡೆಸಲು ನಾವು ಇಲ್ಲಿ ಕುಳಿತಿಲ್ಲ. ನ್ಯಾಯಾಧೀಶರು ಯಾಕೆ ಹನಿಟ್ರ್ಯಾಪ್‌ಗೆ ಒಳಗಾಗುತ್ತಾರೆ ಅದನ್ನು ನ್ಯಾಯಾಧೀಶರು ನೋಡಿಕೊಳ್ತಾರೆ. ಇಂತಹ ಅರ್ಜಿ ವಿಚಾರಣೆ ನಡೆಸಿಕೊಂಡು ಕೂರಲು ನಮಗೆ ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ಗೆ ಮಾಡಲು ಸಾಕಷ್ಟು ಕೆಲಸ ಇದೆ ಎಂದು ಅರ್ಜಿದಾರ ಬಿನಯ್ ಕುಮಾರ್ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ

ಕರ್ನಾಟಕದಲ್ಲಿ ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಗುರಿಯಾಗಿಟ್ಟುಕೊಂಡು ಹನಿಟ್ರ್ಯಾಪ್ ಪ್ರಕರಣ ನಡೆದಿದೆ. ಈ ಬಗ್ಗೆ ಸಚಿವರೇ ವಿಧಾನಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೀಗಾಗಿ ಈ ಬಗ್ಗೆ ಸಿಬಿಐ ಅಥಾವ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಎಸ್‌ಐಟಿ ತ ಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದರು. ಇದನ್ನು ಸರಾಸ ಟಾಗಿ ತಳ್ಳಿಹಾಕಿದ ಸುಪ್ರೀಂಕೋರ್ಟ್ ನ್ಯಾಯಪೀಠ ಅರ್ಜಿ ಸಲ್ಲಿಸಿದ್ದ ಅರ್ಜಿದಾರರನ್ನು ಬೆವರಿಳಿಸಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments