ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಸಂಸದರ ನಡವಳಿಕೆ ಬಗ್ಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಎನ್ ಡಿಎ ಸದಸ್ಯರ ನಡವಳಿಕೆ ಮಾದರಿ ಆಗಿರಬೇಕು ಎಂದು ಸೂಚನೆ ನೀಡಿದ್ದಾರೆ.
ಮಂಗಳವಾರ ನಡೆದ ಎನ್ ಡಿಎ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್ ಡಿಎ ಸಂಸದರು ಸಂಸತ್ ನಿಯಮವನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿ ಆಗಬೇಕು. ನಿಮ್ಮ ನಡವಳಿಕೆಯನ್ನು ಜನರು ಗಮನಿಸುತ್ತಿರುತ್ತಾರೆ ಎಂದು ಪಾಠ ಮಾಡಿದ್ದಾರೆ.
ಮೂರನೇ ಬಾರಿ ಪ್ರಧಾನಿ ಆದ ನಂತರ ಮೊದಲ ಬಾರಿ ನಡೆದ ಆಡಳಿತಾರೂಢ ಸಂಸದರ ಸಭೆಯನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದರು. ನಂತರ ಸುದ್ದಿಗಾರರಿಗೆ ಸಭೆಯ ಮಾಹಿತಿಯನ್ನು ಸಂಸದೀಯ ಸಚಿವ ಕಿರಣ್ ರಿಜುಜು ವಿವರಿಸಿದರು.
ದೇಶದ ಬಗ್ಗೆ ಗಂಭೀರ ಚರ್ಚೆ ನಡೆಸುವ ವೇದಿಕೆ ಆಗಿರುವ ಸಂಸತ್ ಕಲಾಪಕ್ಕೆ ಸಂಸದರು ತಪ್ಪದೇ ಹಾಜರಾಬೇಕು ಎಂದು ಸೂಚನೆ ನೀಡಿದರು. ಅಲ್ಲದೇ ಸಭೆಯಲ್ಲಿ ನಡವಳಿಕೆ ಮಾದರಿಯಾಗಿ ಹೇಗಿರಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ಪ್ರಧಾನಿಯನ್ನು ಸಂಸದರು ಮೂರನೇ ಬಾರಿ ಪ್ರಧಾನಿ ಆಗಿದ್ದಕ್ಕೆ ಅಭಿನಂದಿಸಿದರು ಎಂದು ಅವರು ಹೇಳಿದರು.