ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ ತಯಾರಿಸಿದ ಸುಮಾರು 15 ಉತ್ಪನ್ನಗಳ ಮೇಲಿನ ಪರವಾನಯನ್ನು ಉತ್ತರಾಖಂಡ ಸರ್ಕಾರದ ನಿಯಂತ್ರಕ ಅಮಾನತುಗೊಳಿಸಿದೆ.
ಉತ್ತರಾಖಂಡ ಸರ್ಕಾರ ಏಪ್ರಿಲ್ 24ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಜನರನ್ನು ತಪ್ಪು ದಾರಿಗೆಳೆಯುವ ಜಾಹಿರಾತು ನೀಡಿದ್ದಕ್ಕಾಗಿ ಪತಂಜಲಿ ಸಂಸ್ಥೆಯ 15 ಉತ್ಪನ್ನಗಳ ಪರವಾನಗಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.
ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಾತಿ, ಬ್ರೊಕಂ, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಶ್, ಮುಕ್ತ ವಾತಿ ಎಕ್ಸಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರೀಟ್, ಮಧುನಾಶಿನಿ ವಾತಿ ಎಕ್ಸ್ ಟ್ರಾ ಪವರ್, ಲಿವಮೃತ್ಯು ಅಡ್ವಾನ್ಸ್, ಲಿವೊಗ್ರಿಟ್ ಅಂಡ್ ಐಗ್ರೀಡ್ ಗೋಲ್ಡ್ ಉತ್ಪನ್ನಗಳ ಪರವಾನಗಿ ರದ್ದುಗೊಳಿಸಲಾಗಿದೆ.
ತಮ್ಮ ಕೆಲವು ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ತನ್ನ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಇತ್ತೀಚಿನ ವಾರಗಳಲ್ಲಿ ರಾಮ್ದೇವ್ ಅವರನ್ನು ಪದೇ ಪದೇ ಟೀಕಿಸಿದೆ.
ರಾಮ್ದೇವ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನು ಹೊರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಸುಪ್ರೀಂ ಕೋರ್ಟ್ ನಾಳೆ (ಏಪ್ರಿಲ್ 30) ಪತಂಜಲಿ ಪ್ರಕರಣದ ವಿಚಾರಣೆ ನಡೆಸಲಿದೆ.