ಲೋಕಸಭಾ ಚುನಾವಣೆ 2024ರ ಮತದಾನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ದೇಶಾದ್ಯಂತ 7 ಹಂತಗಳಲ್ಲಿ ನಡೆಯಲಿರುವ ಮತದಾನದ ಮೊದಲ ಹಂತ 21 ರಾಜ್ಯಗಳಲ್ಲಿ ಆರಂಭವಾಗಿದೆ.
543 ಲೋಕಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 370 ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ ಮೈತ್ರಿ ಪಕ್ಷಗಳ ಜೊತೆಗೂಡಿ 400 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಕಾಂಗ್ರೆಸ್ 100 ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದು, ಇಂಡಿಯಾ ಮೈತ್ರಿಕೂಟ ಬಹುಮತ ಪಡೆದು ಅಧಿಕಾರ ಹಿಡಿಯುವ ಗುರಿ ಹೊಂದಿವೆ.
ಮೊದಲ ಹಂತದ ಮತದಾನದಲ್ಲಿ 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 102 ಸ್ಥಾನಗಳಿಗೆ ನಡೆಯಲಿದೆ.
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಪೂರ್ಣ 39 ಸ್ಥಾನಗಳಿಗೆ ಮತದಾನ ನಡೆಯಲಿದೆ. ರಾಜಸ್ಥಾನ 12, ಉತ್ತರ ಪ್ರದೇಶ 8, ಮಧ್ಯ ಪ್ರದೇಶ 6, ಉತ್ತರಾಖಂಡ 5, ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ 2, ಅಂಡಮಾನ್- ನಿಕೊಬಾರ್ ದ್ವೀಪ, ಮಿಜೊರಾಂ, ನಾಗಲ್ಯಾಂಡ್, ಪುದುಚೇರಿ, ಸಿಕ್ಕಿಂ ಮತ್ತು ಲಕ್ಷದ್ವೀಪದಲ್ಲಿ ತಲಾ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಬೆಳಿಗ್ಗೆ 9 ಗಂಟೆ ವೇಳೆಗೆ ತಮಿಳುನಾಡಿನಲ್ಲ ಶೇ. 8.2, ರಾಜಸ್ಥಾನದಲ್ಲಿ ಶೇ.10.7, ಉತ್ತರ ಪ್ರದೇಶದಲ್ಲಿ ಶೇ. 12.2, ಮಧ್ಯಪ್ರದೇಶದಲ್ಲಿ ಶೇ.14.1ರಷ್ಟು ಮತದಾನ ದಾಖಲಾಗಿದೆ. ಒಟ್ಟಾರೆ 9.7ರಷ್ಟು ಮತದಾನ ದಾಖಲಾಗಿದೆ.