ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯು ಗುರುವಾರ ಘೋಷಣೆ ಮಾಡಿದ ಬೆನ್ನಲ್ಲೇ ಮಹೀಂದ್ರ ಥಾರ್ ರಾಕ್ಸ್ ವಾಹನ ಕೇವಲ 60 ನಿಮಿಷದಲ್ಲಿ 1,76,218 ಬುಕ್ಕಿಂಗ್ ಆಗಿ ಹೊಸ ದಾಖಲೆ ಬರೆದಿದೆ.
ದಸರಾ ಹಬ್ಬದ ಪ್ರಯುಕ್ತ ಮಹೀಂದ್ರ ಥಾರ್ ರಾಕ್ಸ್ ವಾಹನಗಳನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಅಲ್ಲದೇ ಬುಕ್ಕಿಂಗ್ ಆದ ವಾಹನಗಳನ್ನು ತಲುಪಿಸುವ ಕೆಲಸ ಆರಂಭಿಸುವುದಾಗಿ ಘೋಷಿಸಿತು. ಇದರ ಬೆನ್ನಲ್ಲೇ ಕೇವಲ 1 ಗಂಟೆಯಲ್ಲಿ 1.76 ಲಕ್ಷ ವಾಹನಗಳು ಬುಕ್ ಆಗುವ ಮೂಲಕ ಭಾರೀ ಬೇಡಿಕೆ ವ್ಯಕ್ತವಾಗಿವೆ.
ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಅಧಿಕೃತ ವೆಬ್ ಸೈಟ್ ಮೂಲಕ ಬುಕ್ಕಿಂಗ್ ಗೆ ಕನಿಷ್ಠ 21 ಸಾವಿರ ರೂ. ಶುಲ್ಕ ವಿಧಿಸಿತ್ತು. ವಾಹನ ಡೆಲಿವರಿ ವೇಳೆ ಗ್ರಾಹಕರಿಗೆ ಮೂರು ವಾರಗಳ ಮುನ್ನ ಮಾಹಿತಿ ನೀಡಲಾಗುತ್ತದೆ. ಈ ವೇಳೆ ಉಳಿದ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾಗಿದೆ.
ಮಹೀಂದ್ರ ಥಾರ್ ರಾಕ್ಸ್ 6 ಮಾದರಿಗಳನ್ನು ಹೊಂದಿದ್ದು, ಎಂಎಕ್ಸ್1, ಎಂಎಕ್ಸ್ 3, ಎಎಕ್ಸ್ 2 ಎಲ್, ಎಎಕ್ಸ್ 5 ಎಲ್ ಮತ್ತು ಎಎಕ್ಸ್ 7ಎಲ್. ಎರಡು ಇಂಜಿನ್ ಹೊಂದಿದ ಜಿ20 ಟಿಜಿಡಿಐ, ಎಂಸ್ಟಾಲಿನ್ ಪೆಟ್ರೋಲ್ ಮತ್ತು ಡಿ22 ಎಂಹಾಕ್ ಡೀಸೆಲ್ ವಾಹನ ಗಳಾಗಿವೆ.
ಪೆಟ್ರೋಲ್ ವಾಹನದ ಕನಿಷ್ಠ ಶೋ ರೂಮ್ ದರ 12.99 ಲಕ್ಷ ರೂ. ಆಗಿದ್ದರೆ, ಡೀಸೆಲ್ ವಾಹನ ದರ ಕನಿಷ್ಠ 13.99 ಲಕ್ಷ ರೂ. ಆಗಿದೆ.