ಭಾರತ ನೆರವು ರೂಪದಲ್ಲಿ ನೀಡಿದ ಯುದ್ಧ ವಿಮಾನಗಳನ್ನು ಹಾರಿಸುವ ಸಾಮರ್ಥ್ಯದ ಪೈಲೆಟ್ ಗಳು ನಮ್ಮ ಬಳಿ ಇಲ್ಲ. ಈಗ ಇರುವ ಪೈಲೆಟ್ ಗಳಿಗೆ ಹಾರಿಸೋಕೆ ಬರಲ್ಲ ಎಂದು ಮಾಲ್ಡಿವ್ಸ್ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಲ್ಡಿವ್ಸ್ ರಕ್ಷಣಾ ಸಚಿವ ಘಾಸಾನ್ ಮೌಮ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಭಾರತದ ಎಲ್ಲಾ 78 ಸೈನಿಕ ತುಕಡಿಗಳು ಮಾಲ್ಡಿವ್ಸ್ ತೊರೆದಿವೆ ಎಂದು ತಿಳಿಸಿದರು.
ಭಾರತದ ಸೈನಿಕರು ಮಾಲ್ಡಿವ್ಸ್ ನಲ್ಲಿ ಇದ್ದಾಗ 2 ಹೆಲಿಕಾಫ್ಟರ್ ಮತ್ತು ನಾಗರಿಕ ರಕ್ಷಣೆ ಮತ್ತು ಸಾಗಾಟಕ್ಕಾಗಿ ಪಡೆದಿದ್ದ ಡೊರಿನರ್ ವಿಮಾನಗಳನ್ನು ಚಲಾಯಿಸಲು ಪೈಲೆಟ್ ಗಳ ಅವಶ್ಯಕತೆ ಇದೆ ಎಂದು ಅಧ್ಯಕ್ಷರಿಗೆ ಶನಿವಾರ ಭೇಟಿ ವೇಳೆ ಮನವರಿಕೆ ಮಾಡಿದ್ದಾಗಿ ತಿಳಿಸಿದರು.
ಭಾರತ ನೆರವಿಗಾಗಿ ನೀಡಿದ್ದ ಮೂರು ಯುದ್ಧ ವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿರುವ ಪೈಲೆಟ್ ಗಳು ನಮ್ಮ ರಕ್ಷಣಾ ಪಡೆಗಳಲ್ಲಿ ಇಲ್ಲ. ಒಪ್ಪಂದದ ಹಿನ್ನೆಲೆಯಲ್ಲಿ ಈಗಷ್ಟೇ ಕೆಲವು ಪೈಲೆಟ್ ಗಳಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಅವರು ವಿವರಿಸಿದರು.
ಈ ಯುದ್ಧ ವಿಮಾನಗಳನ್ನು ಹಲವು ಹಂತಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ನಮ್ಮ ಪೈಲೆಟ್ ಗಳು ತರಬೇತಿ ಪೂರ್ಣಗೊಳಿಸಿಲ್ಲ. ಪೂರ್ಣ ಸಾಮರ್ಥ್ಯ ಹೊಂದಿರುವ ಭಾರತದ ಯುದ್ಧ ವಿಮಾನಗಳನ್ನು ಚಲಾಯಿಸುವ ಸಂಪೂರ್ಣ ಜ್ಞಾನ ಹೊಂದಿಲ್ಲ ತರಬೇತಿಯನ್ನೂ ಪಡೆದಿಲ್ಲ ಎಂದು ಸಚಿವ ಹೇಳಿದರು.