ಪ್ರಧಾನಿ ಮೋದಿಗೆ ಸೋಲಿನ ಭಯ ಶುರುವಾಗಿದೆ ಹಾಗಾಗಿ ಮುಸ್ಲಿಮರು ಮತ್ತು ಮಂಗಳಸೂತ್ರ ವಿಷಯವನ್ನು ಕೆದಕುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಚಂಡೀಗಢದ ಜಾಜಿಗರ್-ಚಂಪಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಸಂಪತ್ತು ಹಂಚಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದಿದ್ದಾರಾ? ಬಡವರು ಕೂಡ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂದರು.
ಹೆಚ್ಚು ಮಕ್ಕಳನ್ನು ಹೊಂದಿರುವವರು ಬಡವರಾಗಿತ್ತಾರಾ? ಹಾಗಂತ ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದು ಏಕೆ ಹೇಳುತ್ತಾರೆ. ಮುಸ್ಲಿಮರು ಕೂಡ ಈ ದೇಶದ ಪ್ರಜೆಗಳು. ನನಗೆ 5 ಮಕ್ಕಳು ಇದ್ದಾರೆ. ಆದರೆ ನನಗೆ ಹುಟ್ಟಿದ್ದು ಮಾತ್ರ ಒಂದೇ ಅಂದರು.
ನನ್ನ ಸೋದರಿ, ಸೋದರರ ಮನೆಗೆ ಬೆಂಕಿ ಬಿದ್ದಿತ್ತು. ಹಾಗಾಗಿ ಅವರ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡೆ. ಈಗ ಅವರು, ಅವರ ಮಕ್ಕಳು ನನ್ನ ಮಕ್ಕಳೇ ಆಗಿದ್ದಾರೆ. ನನ್ನ ತಂದೆ ನನಗೆ ಹೇಳಿದ್ದರು. ನನಗೆ ನೀನೊಬ್ಬನೇ ಮಗ. ಹಾಗಾಗಿ ನನ್ನ ಮಕ್ಕಳನ್ನು ನೋಡುವ ಆಸೆ ವ್ಯಕ್ತಪಡಿಸಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ವಿವರಿಸಿದರು.