ಭಾರತದ ಮಹಿಳಾ ವೇಟ್ ಲಿಫ್ಟರ್ ಕೇವಲ 1 ಕೆಜಿ ತೂಕದ ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.
ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದ ಮೀರಾ ಭಾಯಿ ಚಾನು 199 ಅಂಕದೊಂದಿಗೆ 4ನೇ ಸ್ಥಾನಿಯಾಗಿ ಒಲಿಂಪಿಕ್ಸ್ ನಲ್ಲಿ ನಿರಾಶಾದಾಯಕವಾಗಿ ಅಭಿಯಾನ ಅಂತ್ಯಗೊಳಿಸಿದರು. ಥಾಯ್ಲೆಂಡ್ ನ ಸುರೊದ್ ಚಾನಾ ಖಾಮಾಡೊ 200 ಅಂಕದೊಂದಿಗೆ ಕಂಚಿನ ಪದಕ ಗೆದ್ದುಕೊಂಡರು.
ಮೀರಾಭಾಯಿ ಚಾನು ಮತ್ತು ಖಾಮಾಡೊ ಸ್ನ್ಯಾಚ್ ಸುತ್ತಿನಲ್ಲಿ 88ಕೆಜಿ ಭಾರ ಎತ್ತಿ ಸಮಬಲ ಸಾಧಿಸಿದ್ದರು. ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಥಾಯ್ಲೆಂಡ್ ಸ್ಪರ್ಧಿ 118 ಕೆಜಿ ಭಾರ ಎತ್ತಿದರೆ, ಮೀರಾ ಭಾಯಿ ಚಾನು 110 ಕೆಜಿ ಭಾರ ಎತ್ತಿದರು.
ನಂತರ ಮೀರ ಭಾಯಿ 117 ಕೆಜಿ ಭಾರ ಎತ್ತಲು ಎರಡು ಬಾರಿ ಪ್ರಯತ್ನ ನಡೆಸಿದರೂ ಫಲಕಾರಿಯಾಗದೇ ಪದಕದಿಂದ ವಂಚಿತರಾದರು.