ಖಂಡಾಂತರ ಕ್ಷಿಪಣಿ ಅಗ್ನಿ-5 ಅನ್ನು ವಿಮಾನದ ಮೂಲಕ ನಡೆಸಿದ ಚೊಚ್ಚಲ ಪರೀಕ್ಷೆ ಯಶಸ್ವಿಯಾಗಿದೆ. ಈ ಮೂಲಕ ಭಾರತದ ರಕ್ಷಣಾ ಸಾಮರ್ಥ್ಯ ದುಪ್ಪಟ್ಟು ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಿಷನ್ ದಿವ್ಯಾಸ್ತ್ರ ಎಂದು ಹೆಸರಿಡಲಾಗದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಏಕಕಾಲಕ್ಕೆ ಹಲವು ಕಡೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿ ವಿಮಾನದ ಮೂಲಕ ಪ್ರತ್ಯೇಕಗೊಂಡ ಗುರಿಯನ್ನು ನಿಖರವಾಗಿ ತಲುಪುವ ಪರೀಕ್ಷೆ ಯಶಸ್ವಿಗೊಂಡಿದೆ.
ಅಗ್ನಿ-5 ಕ್ಷಿಪಣಿ 5500ದಿಂದ 5800 ಕಿ.ಮೀ. ದೂರದವರೆಗೆ ಸಾಗಬಲ್ಲದು. ಅಗ್ನಿ ಅತ್ಯಂತ ದೂರ ಸಾಗಬಲ್ಲ ಕ್ಷಿಪಣಿ ಆಗಿದ್ದು, ಇದು ಅಣು ಹೊತ್ತ ಖಂಡಾಂತರ ಕ್ಷಿಪಣಿ ಆಗಿದೆ. ವಾಯು ಮಾರ್ಗದ ದಾಳಿ ಯಶಸ್ವಿಯಾಗುವ ಮೂಲಕ ಭಾರತ ಸಮುದ್ರ ಮತ್ತು ನೆಲದ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.