ಜಾಗತಿಕ ಮಟ್ಟದಲ್ಲಿ ತೀವ್ರ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ಭಾರತಕ್ಕೂ ಕಾಲಿಟ್ಟಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ.
ಈಗಾಗಲೇ ಗುಜರಾತ್ ನಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಶಂಕೆ ಹಿನ್ನೆಲೆಯಲ್ಲಿ ರಾಜ್ಯಕ್ಕೂ ಮಂಕಿಫಾಕ್ಸ್ ಲಗ್ಗೆ ಇಡೋ ಆತಂಕ ಶುರುವಾಗಿದೆ.
ಮಂಕಿಫಾಕ್ಸ್ ಎಂಟ್ರಿ ಮುನ್ನವೇ ಆಲರ್ಟ್ ಆಗಿರುವ ರಾಜ್ಯ ಆರೋಗ್ಯ ಇಲಾಖೆ, ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಲು ಸಜ್ಜಾಗಿದೆ.
ವಿದೇಶೀ ಪ್ರವಾಸಿಗರ ಆರೋಗ್ಯ ಮತ್ತು ರೈಲ್ವೆ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರಂಭಿಸಿದೆ.
ಕೊರೊನಾ ವೈರಸ್ ಬಳಿಕ ದೇಶಕ್ಕೆ ಮತ್ತೊಂದು ವೈರಸ್ ಹಾವಳಿ ಭೀತಿ ಎದುರಾಗಿದ್ದು, ಆಫ್ರಿಕಾ ದೇಶಗಳಿಗೆ ಹಬ್ಬಿರುವ ಮಂಕಿಪಾಕ್ಸ್ ಭಾರತಕ್ಕೂ ಲಗ್ಗೆ ಇಟ್ಟಿರುವ ಶಂಕೆ ಇದೆ.
ಸೋಂಕುಪೀಡಿತ ದೇಶದಿಂದ ಬಂದವನಲ್ಲಿ ಸೋಂಕು ಲಕ್ಷಣ ಕಂಡು ಬಂದಲ್ಲಿ ರಕ್ತ ಮಾದರಿ ಪರೀಕ್ಷೆ ರವಾನೆ ಸಂಪರ್ಕಿತರ ಪಟ್ಟಿ ಸಂಗ್ರಹ ಮಾಡಲಾಗುತ್ತಿದೆ.
ವಿಶ್ವಾದ್ಯಂತ ಮಂಕಿಪಾಕ್ಸ್ ಸಾಂಕ್ರಾಮಿಕ ರೋಗವಾಗಿ ಹರಡುತ್ತಿದ್ದು, ಜಾಗತಿಕ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿ ಸೋಂಕು ಇದೀಗ ಭಾರತದ ನೆರೆಯ ದೇಶವಸದ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿದೆ. ಪಾಕಿಸ್ತಾನದ ಖೈಬರ್ ಪಖೂನ್‌ಗ್ವಾ ಪ್ರಾಂತ್ಯದಲ್ಲಿ ಸಾಂಕ್ರಾಮಿಕ ದೃಢಪಟ್ಟಿದೆ.
ಮೂರು ರೂಪಾಂತರಿ ಪ್ರಕರಣ ಗಳು ದೃಢಪಟ್ಟಿವೆ ಎಂದು ಪಾಕ್ ಪಾಕಿಸ್ತಾನ ಸರ್ಕಾರ ಘೋಷಿಸಿದ್ದು, ಭಾರತಕ್ಕೂ ಪ್ರವೇಶಿಸುವ ಆತಂಕ ಉಂಟು ಮಾಡಿದೆ.
ಮಂಕಿಪಾಕ್ಸ್‌ನ 14000ಕ್ಕೂ ಹೆಚ್ಚು ಪ್ರಕರಣಗಳು ಜಗತ್ತಿನಾದ್ಯಂತ ಪತ್ತೆಯಾಗಿದ್ದು, ಒಂದೇ ವರ್ಷದಲ್ಲೇ ಆಫ್ರಿಕಾ ದೇಶಗಳಲ್ಲಿ 450ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.