ಪಾಕಿಸ್ತಾನ ಬಲೂಚಿಸ್ತಾನದ ವಿವಿಧೆಡೆ ಉಗ್ರರು ಮಾರಣಾಂತಿಕ ದಾಳಿ ನಡೆಸಿದ್ದರಿಂದ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 23 ಮಂದಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬಲೂಚಿಸ್ತಾನದಲ್ಲಿ ಪೊಲೀಸ್ ನಿಲ್ದಾಣ, ರೈಲ್ವೆ ಸೇತುವೆಗಳನ್ನು ಸ್ಫೋಟಿಸಿರುವ ಗನ್ ಹಾಗೂ ಸ್ಫೋಟಕಗಳನ್ನು ಹೊಂದಿದ್ದ ವ್ಯಕ್ತಿ, ಬಸ್ ಪ್ರಯಾಣಿಕರು ಹಾಗೂ ಲಾರಿ ಚಾಲಕರು ಅಲ್ಲದೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದಾನೆ.
ಮುಷ್ಕಿಲ್ ಪ್ರದೇಶದ ಸೇತುವೆ ಬಳಿ ಬಸ್ ನಿಲ್ಲಿಸಿದ ಗನ್ ಹಿಡದಿದ್ದ ಉಗ್ರ ಬಸ್ ನಿಂದ ಒಬ್ಬೊಬ್ಬರಾಗಿ ಇಳಿಯುವಂತೆ ಸೂಚಿಸಿ ಅವರ ಗುರುತು ಪತ್ರ ಗಮನಿಸಿ ಸರಣಿ ಹತ್ಯೆ ಮಾಡಿದ್ದಾನೆ.
ಗನ್ ಹೊಂದಿದ್ದ ವ್ಯಕ್ತಿ ಬಸ್ ನಲ್ಲಿ ಇದ್ದವರನ್ನು ಮಾತ್ರ ಕೊಂದಿಲ್ಲ. ಬದಲಾಗಿ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಚಾಲಕರು ಮತ್ತು ಇತರೆ ಬಸ್ ಚಾಲಕ ಮತ್ತು ಕಂಡಕ್ಟರ್ ಗಳನ್ನು ಹತ್ಯೆಗೈದಿದ್ದಾನೆ.
ಸುಮಾರು 10ಕ್ಕೂ ಹೆಚ್ಚು ಲಾರಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿರುವ ಉಗ್ರ, ಪೊಲೀಸ್ ಠಾಣೆ, ರೈಲ್ವೆ ಹಳಿಯ ಬಳಿ ಹಾಗೂ ಬಸ್ ನಿಲ್ದಾಣಗಳ ಮೇಲೆ ಎಲ್ಲೆಂದರಲ್ಲಿ ಹೋಗಿ ಗುಂಡಿನ ದಾಳಿ ನಡೆಸಿ ಪೈಶಾಚಿಕ ಕೃತ್ಯ ಎಸಗಿದ್ದಾನೆ.
ಪಾಕಿಸ್ತಾನ ಮತ್ತು ಇರಾನ್ ನಡುವಿನ ಕ್ವೆಟ್ಟಾ ಬಳಿ ರೈಲು ಹಳಿಗಳನ್ನು ಬಾಂಬ್ ಹಾಕಿ ಸ್ಫೋಟಗೊಳಿಸಿ ಹಾನಿಗೊಳಿಸಿದ್ದಾನೆ. ಈತ ಕೊಂದ ಬಹುತೇಕ ಮಂದಿಯವರು ಪಂಜಾಬ್ ಪ್ರಾಂತ್ಯದವರಾಗಿದ್ದಾರೆ.
ನಿಷೇಧಿತ ಬಲೂಚಿಸ್ತಾನ ಪ್ರತ್ಯೇಕತಾವಾದಿ ಸೇನೆಗೆ ಸೇರಿದವನೆಂದು ಹೇಳಿಕೊಂಡಿರುವ ವ್ಯಕ್ತಿ, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಮೇಲೂ ದಾಳಿ ಮಾಡಿ ಕನಿಷ್ಠ 10 ಮಂದಿಯನ್ನು ಹತ್ಯೆಗೈದಿದ್ದಾನೆ.