ಫೋರ್ಬ್ಸ್ ಬಿಡುಗಡೆ ಮಾಡಿದ 2024ರ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ 200ಕ್ಕೇರಿದೆ. ಇದೇ ವೇಳೆ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿರುವ ಮುಖೇಶ್ ಅಂಬಾನಿ ಅಗ್ರಸ್ಥಾನಕ್ಕೇರಿದ್ದಾರೆ.
ಮುಖೇಶ್ ಅಂಬಾನಿ ಒಟ್ಟಾರೆ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.40ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 675 ಶತಕೋಟಿ ಡಾಲರ್ ಆಗಿತ್ತು. ಇದೀಗ ಅಂದರೆ 2023 ಅಂತ್ಯಕ್ಕೆ 954 ಶತಕೋಟಿ ಡಾಲರ್ ದಾಟಿದೆ. ಮುಖೇಶ್ ಅಂಬಾನಿ ಅವರ ವೈಯಕ್ತಿಕ ಆಸ್ತಿ ಮೌಲ್ಯ 83 ಶತಕೋಟಿ ಡಾಲರ್ ನಿಂದ 116 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ.
ಮುಖೇಶ್ ಅಂಬಾನಿ ಈ ವರ್ಷ ಭಾರತ ಮತ್ತು ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟ ಅಲಂಕರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ 9ನೇ ಸ್ಥಾನ ಗಳಿಸಿದ್ದಾರೆ.
ಕಳೆದ ವರ್ಷ ತೀವ್ರ ಹಿನ್ನಡೆ ಅನುಭವಿಸಿದ್ದ ಗೌತಮ್ ಅದಾನಿ ಆಸ್ತಿ 36 ಶತಕೋಟಿ ಡಾಲರ್ ಏರಿಕೆಯಾಗಿದೆ. ಇದರಿಂದ ಅವರು ಭಾರತದಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಾಗತಿಕ ಮಟ್ಟದಲ್ಲಿ 17ನೇ ಸ್ಥಾನಕ್ಕೆ ಇಳಿದಿದ್ದಾರೆ.
ಸಾವಿತ್ರಿ ಜಿಂದಾಲ್ ದೇಶದ ಶ್ರೀಮಂತ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಆಸ್ತಿ 33.5 ಶತಕೋಟಿ ಡಾಲರ್ ಆಗಿದೆ.