ಪಹಲ್ಗಾವ್ ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆಗೈದ ಘಟನೆಗೆ ಪ್ರತಿಕಾರವಾಗಿ ಭಾರತೀಯ ಸೇನೆ ಜಮ್ಮು ಕಾಶ್ಮೀರದಲ್ಲಿ 10 ಉಗ್ರರ ಮನೆಗಳನ್ನು ಸ್ಫೋಟಿಸಲಾಗಿದೆ.
ಪಹಲ್ಗಾವ್ ನಲ್ಲಿ ಉಗ್ರರ ದಾಳಿ ನಡೆದ ಕಳೆದ ಒಂದು ವಾರದಲ್ಲಿ ಜಮ್ಮು ಕಾಶ್ಮೀರದ ವಿವಿದೆಡೆ ಗುರುತಿಸಲಾಗಿದ್ದ 10 ಉಗ್ರರ ಮನೆಗಳನ್ನು ಉಡಾಯಿಸಲಾಗಿದೆ.
ಲಷ್ಕರೆ ಇ-ತೋಯ್ಬಾದ ಅದಿಲ್ ಹುಸೇನ್ ಥೋಕರ್, ಜಾಕಿರ್ ಅಹ್ಮದ್ ಗನಾಯಿ, ಅಮಿರ್ ಅಹ್ಮದ್ ದರ್, ಆಸೀಫ್ ಶೇಖ್, ಶಾಹಿದ್ ಅಹ್ಮದ್ ಕುಟ್ಟೆ, ಅಹ್ಸನ್ ಉಲ್ ಹಕ್ ಅಮಿರ್, ಜೈಷೆ- ಇ- ಮೊಹಮದ್ ಸಂಘಟನೆಯ ಅಮಿರ್ ನಜೀರ್ ಅಹ್ಮದ್ ವಾನಿ, ಜಮೀಲ್ ಅಹ್ಮದ್ ಶೇರ್ ಗೋರ್ಜಿ ಹಾಗೂ ರಿಸಿಸ್ಟೆನ್ಸ್ ಫ್ರಂಟ್ ನ ಅದ್ನಾನ್ ಸಾಫಿ ದರ್ ಮತ್ತು ಫಾರೂಖ್ ಅಹ್ಮದ್ ಟೆಡ್ವಾ ಮನೆಗಳನ್ನು ಸ್ಫೋಟಿಸಲಾಗಿದೆ.
ಅಹ್ಸನ್ ಉಲ್ ಹಕ್ 2018ರಲ್ಲಿ ಪಾಕಿಸ್ತಾನಿದಂದ ತರಬೇತಿ ಪಡೆದ ಉಗ್ರನಾಗಿದ್ದು, ಇತ್ತೀಚೆಗೆ ಭಾರತದ ಗಡಿಯೊಳಗೆ ನುಸುಳಿದ್ದ. ಲಷ್ಕರೆ ಕಮಾಂಡರ್ ಶಹೀದ್ ಅಹ್ಮದ್ ಕುಟ್ಟೈ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಭದ್ರತಾ ಸಿಬ್ಬಂದಿ ಅಧಿಕಾರಿಗಳು ತಿಳಿಸಿದ್ದಾರೆ.


