Thursday, December 25, 2025
Google search engine
Homeದೇಶಕಲಬೆರಕೆ ತುಪ್ಪ ಬಳಸಿ 20 ಕೋಟಿ ಲಡ್ಡು ತಯಾರಿ: ತಿರುಪತಿ ಅಧಿಕಾರಿ ಶಾಕಿಂಗ್ ಹೇಳಿಕೆ

ಕಲಬೆರಕೆ ತುಪ್ಪ ಬಳಸಿ 20 ಕೋಟಿ ಲಡ್ಡು ತಯಾರಿ: ತಿರುಪತಿ ಅಧಿಕಾರಿ ಶಾಕಿಂಗ್ ಹೇಳಿಕೆ

2019-2024ರ ಅವಧಿಯಲ್ಲಿ ನಕಲಿ ತುಪ್ಪ ಬಳಸಿ 20 ಕೋಟಿಗೂ ಅಧಿಕ ಲಡ್ಡುಗಳನ್ನು ತಯಾರಿಸಲಾಗಿತ್ತು ಎಂಬ ಆಘಾತಕಾರಿ ವಿಷಯವನ್ನು ತಿರುಪತಿ ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ತಿರುಮತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಜನಪ್ರಿಯ ಲಡ್ಡುಗಳಿಗೆ ನಕಲಿ ತುಪ್ಪ ಬಳಕೆ ಕುರಿತು ತನಿಖೆ ನಡೆಯುತ್ತಿದೆ.

ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ (ಟಿಟಿಡಿ) ಅಧ್ಯಕ್ಷ ಬಿಆರ್ ನಾಯ್ಡು ಮಾತನಾಡಿ 2019-24ರ ಅವಧಿಯಲ್ಲಿ ದೇವಸ್ಥಾನದಿಂದ 48.76 ಕೋಟಿ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಗಿತ್ತು ಎಂದು ಹೇಳಿದ್ಧಾರೆ.

ದೇವಸ್ಥಾನದಲ್ಲಿ 2019-24 ರ ಅವಧಿಯಲ್ಲಿ ಸುಮಾರು 49 ಕೋಟಿ ಲಡ್ಡು ವಿತರಿಸಲಾಗಿದ್ದರೆ ಇದರಲ್ಲಿ 20 ಕೋಟಿಯಷ್ಟು ಲಡ್ಡುಗಳು ಕಲಬೆರಕೆ ತುಪ್ಪ ಬಳಸಿ ಸಿದ್ದಪಡಿಸಿದ್ದು ಆಗಿತ್ತು ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ತಿರುಪತಿಗೆ ಕರ್ನಾಟಕದ ಶುದ್ಧ ನಂದಿನಿ ತುಪ್ಪ ಖರೀದಿಸಲಾಗುತ್ತಿತ್ತು. ಆದರೆ ಈ ಅವಧಿಯಲ್ಲಿ ಉತ್ತರಾಖಂಡ್ ನ ಭೋಲೆ ಬಾಬಾ ಡೇರಿಯಿಂದ ಖರೀದಿಸಲಾಗಿದ್ದ ತುಪ್ಪ ಕಲಬೆರಕೆಯದ್ದು ಎಂದು ತಿಳಿದು ಬಂದಿದೆ.

ಪಾಮ್ ಆಯಿಲ್, ಖರೀದಿ ಪಾಮ್ ಆಯಿಲ್, ಬೆರೆಸಿದ 68 ಕೆಜಿ ತುಪ್ಪ ಖರೀದಿಸಲಾಗಿದ್ದು, 250 ಕೋಟಿ ರೂ. ವಂಚನೆ ಆಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಎಸ್ ಐಟಿ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಪ್ರಗತಿ ಹಂತದಲ್ಲಿದೆ.

2019-24ರ 5 ವರ್ಷಗಳ ಅವಧಿಯಲ್ಲಿ 11 ಕೋಟಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗಣ್ಯ ವ್ಯಕ್ತಿಗಳು ಕೂಡ ಭೇಟಿ ನೀಡಿದ್ದು, ಇವರಿಗೆ ವಿತರಿಸಲಾದ ಲಡ್ಡುಗಳು ಕಲೆಬೆರಕೆಯ ಲಡ್ಡುಗಳಾಗಿದ್ದು, ಯಾರಿಗೆ ಎಷ್ಟು ತಲುಪಿದೆ ಎಂಬ ಮಾಹಿತಿ ಕಂಡು ಹಿಡಿಯುವುದು ಕಷ್ಟ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments