Wednesday, December 24, 2025
Google search engine
Homeದೇಶಅರುಣಾಚಲದಲ್ಲಿ 1000 ಅಡಿ ಆಳದ ಪ್ರಪಾತಕ್ಕೆ ಬಸ್ ಬಿದ್ದು 21 ಕಾರ್ಮಿಕರ ದುರ್ಮರಣ ಶಂಕೆ!

ಅರುಣಾಚಲದಲ್ಲಿ 1000 ಅಡಿ ಆಳದ ಪ್ರಪಾತಕ್ಕೆ ಬಸ್ ಬಿದ್ದು 21 ಕಾರ್ಮಿಕರ ದುರ್ಮರಣ ಶಂಕೆ!

ಅರುಣಾಚಲ ಪ್ರದೇಶದ ಕಡಿದಾದ ತಿರುವಿನಲ್ಲಿ ಬಸ್ 1000 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಬಸ್ ನಲ್ಲಿದ್ದ 21 ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮಂಗಳವಾರ ತಡರಾತ್ರಿ ಅರುಣಾಚಲ ಪ್ರದೇಶದ ಹಯುಲಿಯಾಂಗ್-ಚಾಗಲಗಂ ರಸ್ತೆಯಲ್ಲಿ ಕಡಿದಾದ ತಿರುವುಗಳಲ್ಲಿ ಸಂಚರಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ.

ಆದರೆ ಬುಧವಾರ ರಾತ್ರಿ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರ ಪ್ರಕಾರ, ಗುರುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಪ್ರಾರಂಭವಾಯಿತು. ಟ್ರಕ್ ಕನಿಷ್ಠ 1000 ಅಡಿ ಆಳಕ್ಕೆ ಬಿದ್ದಿದೆ.

ತಿನ್ಸುಕಿಯಾದ ಗೆಲಾಪುಖುರಿ ಟೀ ಎಸ್ಟೇಟ್‌ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಬುಧೇಶ್ವರ್ ದೀಪ್, ರಾಹುಲ್ ಕುಮಾರ್, ಸಮೀರ್ ದೀಪ್, ಜೂನ್ ಕುಮಾರ್, ಪಂಕಜ್ ಮಂಕಿ, ಅಜಯ್ ಮಂಕಿ, ಬಿಜಯ್ ಕುಮಾರ್, ಅಭಯ್ ಭೂಮಿಜ್, ರೋಹಿತ್ ಮಂಕಿ, ಬೀರೇಂದ್ರ ಕುಮಾರ್, ಅಗರ್ ತಂತಿ, ಧಿರೇನ್ ಚೇಟಿಯಾ, ರಜನಿ ನಾಗ್, ದೀಪ್ ಗೋವಾಲಾ, ರಾಮಚಬಕ್ ಸೋನಾರ್, ಸೋನಾತನ್ ನಾಗ್, ಸಂಜಯ್ ಕುಮಾರ್, ಕರಣ್ ಕುಮಾರ್ ಮತ್ತು ಜೋನಾಸ್ ಮುಂಡಾ ಸೇರಿದಂತೆ 19 ಮಂದಿಯನ್ನು ಗುರುತಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments