2019, ಏಪ್ರಿಲ್ 1ರಿಂದ 2024 ಫೆಬ್ರವರಿ 15ರ ಅವಧಿಯಲ್ಲಿ 22,217 ಎಲೆಕ್ಟ್ರಾಲ್ ಬಾಂಡ್ ಖರೀದಿ ಮಾಡಲಾಗಿದ್ದು, ಇದರಲ್ಲಿ 22,030 ಹಣದ ಬದಲಾಗಿ ಬೇರೆ ಲಾಭಗಳನ್ನು ಪಡೆಯಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಪ್ರೀಂಕೋರ್ಟ್ ಗೆ ನೀಡಿದ ವರದಿಯಲ್ಲಿ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಜಕೀಯ ಪಕ್ಷಗಳಿಗೆ ನೀಡಿದ ಎಲೆಕ್ಟ್ರಾಲ್ ಬಾಂಡ್ ವಿವರವನ್ನು ಕೇಂದ್ರ ಚುನಾವಣಾ ಅಯೋಗಕ್ಕೆ ಮುಚ್ಚಿದ ಲಕೋಟೆಯಲ್ಲಿ ನೀಡಿತ್ತು. ಇದರ ವಿವರವನ್ನು ಬುಧವಾರ ಸುಪ್ರೀಂಕೋರ್ಟ್ ಗೆ ನೀಡಿತು.
ಎಲೆಕ್ಟ್ರಾಲ್ ಬಾಂಡ್ ಖರೀದಿ ಮೊತ್ತದ ವಿವರ ಹಾಗೂ ಯಾವ ಪಕ್ಷಗಳಿಗೆ ನೀಡಿದೆ ಎಂಬ ವಿವರವನ್ನು ಎಸ್ ಬಿಐ ನೀಡದೇ ಇದ್ದರೂ ಇದರ ಒಟ್ಟಾರೆ ಅಂದಾಜು ಮೊತ್ತ 16,500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಎಸ್ ಬಿಐ 22,217 ಎಲೆಕ್ಟ್ರಾಲ್ ಬಾಂಡ್ ಖರೀದಿಸಿದೆ. ಅದರಲ್ಲಿ 22,030 ಎಲೆಕ್ಟ್ರಾಲ್ ಬಾಂಡ್ ಗಳನ್ನು ಸುಮ್ಮನೆ ಖರೀದಿಸಿಲ್ಲ. ಬದಲಾಗಿ ಬೇರೆ ಲಾಭಗಳನ್ನು ಪಡೆಯುವ ಉದ್ದೇಶದಿಂದ ನೀಡಲಾಗಿದೆ. ಅಲ್ಲದೇ ಬಹುತೇಕ ಎಲೆಕ್ಟ್ರಾಲ್ ಬಾಂಡ್ ಅನ್ನು ನೇರವಾಗಿ ಖರೀದಿಸದೇ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಮುಖಾಂತರ ನೀಡಲಾಗಿದೆ ಎಂದು ವಿವರಿಸಿದೆ.