12ಕ್ಕೂ ಅಧಿಕ ಮಕ್ಕಳನ್ನು ಬಲಿ ಪಡೆದ ಕಾಫ್ ಸಿರಪ್ ತಯಾರಿಸುವ ಸ್ರೆಸನ್ ಫಾರ್ಮಾ ಕಂಪನಿ 364 ನಿಯಮಗಳನ್ನು ಗಾಳಿಗೆ ತೂರಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಮಧ್ಯಪ್ರದೇಶದಲ್ಲಿರುವ ಮಕ್ಕಳಿಗೆ ನೀಡುವ ಕಾಫ್ ಸಿರಪ್ ತಯಾರಿಸುವ ಕಂಪನಿ ಔಷಧಿಯನ್ನು ಕನಿಷ್ಠ ಪರೀಕ್ಷೆಯನ್ನೂ ನಡೆಸದೇ ನೇರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕಾಫ್ ಸಿರಪ್ ಕೋಲ್ಡ್ರಿಫ್ ಸಿರಪ್ ತಯಾರಿಸುವ ಶ್ರೆಸನ್ ಫಾರ್ಮಾ ಕಂಪನಿಯ ಒಡೆತನವನ್ನು ರಂಗನಾಥನ್ ಗೋವಿಂದನ್ ಹೊಂದಿದ್ದು, ಈತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಕಂಪನಿ ಬಾಗಿಲು ಮುಚ್ಚಿದ್ದಾರೆ.
ದೇಶಾದ್ಯಂತ ಭೀತಿ ವಾತಾವರಣ ಸೃಷ್ಟಿಸಲು ಕಾರಣವಾದ ಕೋಲ್ಡ್ರಿಫ್ ಸಿರಪ್ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳು ಅಸುನೀಗಿದ್ದಾರೆ. ಈ ಸಿರಪ್ ನಲ್ಲಿ ನಿಷೇಧಿಸಲಾದ ವಿಷಕಾರಿ ವಸ್ತುಗಳು ಇರುವುದು ದೃಢಪಟ್ಟಿವೆ.
ಸ್ರೆಸನ್ ಫಾರ್ಮಾ ಮಾಲೀಕ ರಂಗನಾಥನ್ ಗೋವಿಂದನ್ ಮತ್ತು ಅವರ ಪತ್ನಿ ಘಟನೆಯ ಬೆನ್ನಲ್ಲೇ ಪರಾರಿಯಾಗಿದ್ದು, ಗುರುವಾರ ಬೆಳಗಿನ ಜಾವ 1:30 ರ ಸುಮಾರಿಗೆ ಅವರನ್ನು ಚೆನ್ನೈನಲ್ಲಿ ಬಂಧಿಸಲಾಯಿತು.
ಕಂಪನಿಯು ಚೆನ್ನೈನಲ್ಲಿ ಉತ್ಪಾದನಾ ಘಟಕ ಹೊಂದಿದ್ದು, 364 ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಇದರಲ್ಲಿ 38 ಅತ್ಯಂತ ಗಂಭೀರವಾದ ನಿಯಮಗಳನ್ನು ಪಾಲಿಸಿಲ್ಲ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
2011 ರಲ್ಲಿ ಕಾರ್ಯನಿರ್ವಹಿಸಲು ಪರವಾನಗಿ ಪಡೆದ ಸ್ರೆಸನ್ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2016 ರಲ್ಲಿ ನವೀಕರಿಸಲಾದ ಈ ಪರವಾನಗಿಯನ್ನು ತಮಿಳುನಾಡು FDA ನೀಡಿತ್ತು ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಇದರಲ್ಲಿ ಭಾಗಿಯಾಗಿಲ್ಲ, ಅಂದರೆ ಕೇಂದ್ರಕ್ಕೆ ಇದರ ಬಗ್ಗೆ ತಿಳಿದಿರಲಿಲ್ಲ.


