ನಕಲಿ ನೋಟು ದಂಧೆ ನಡೆಸುತ್ತಿದ್ದ ಅಲ್ ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ನಾಲ್ವರನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ.
ನಕಲಿ ನೋಟು ದಂಧೆ ನಡೆಸುತ್ತಿದ್ದ ಉಗ್ರರ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದ್ದು, ಮೂವರು ಗುಜರಾತ್ ಹಾಗೂ ಒಬ್ಬ ಮತ್ತೊಂದು ರಾಜ್ಯದಲ್ಲಿ ಬಂಧಿಸಲಾಗಿದೆ.
ಮೊಹಮದ್ ಫೈಕ್, ಮೊಹಮದ್ ಫರೀನ್, ಶೈಫುಲ್ಲಾ ಖುರೇಷಿ, ಶೀಶಾನ್ ಅಲಿ ಅವರನ್ನು ಬಂಧಿಸಲಾಗಿದ್ದು, ಇವರು ಸಾಮಾಜಿಕ ಜಾಲತಾಣದಲ್ಲಿ ಉಗ್ರರ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಟೋ ಡಿಲಿಟ್ ಆಪ್ ಬಳಸುತ್ತಿದ್ದ ನಾಲ್ವರು ಉಗ್ರರು ತನಿಖಾಧಿಕಾರಿಗಳು ಇವರನ್ನು ಪತ್ತೆ ಹಚ್ಚಲು ಆಗದಂತೆ ನೋಡಿಕೊಂಡಿದ್ದರು. ಗುಜರಾತ್ ಉಗ್ರರ ನಿಗ್ರಹ ಪಡೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸಿದ್ದಾರೆ.
ಉಗ್ರ ಚಟುವಟಿಕೆ ಕುರಿತು ನಾಲ್ವರು ಚರ್ಚೆ ನಡೆಸುತ್ತಿದ್ದಾಗ ಗುಜರಾತ್ ಉಗ್ರರ ನಿಗ್ರಹ ಪಡೆ ಕಣ್ಣಿಗೆ ನಾಲ್ವರು ಬಿದ್ದಿದ್ದಾರೆ.


