Sunday, February 22, 2026
Google search engine
Homeದೇಶಬಿರಿಯಾನಿ ಹೋಟೆಲ್ ಗಳಲ್ಲಿ 70,000 ಕೋಟಿ ಬೃಹತ್ ಬಿಲ್ಲಿಂಗ್ ಹಗರಣ!

ಬಿರಿಯಾನಿ ಹೋಟೆಲ್ ಗಳಲ್ಲಿ 70,000 ಕೋಟಿ ಬೃಹತ್ ಬಿಲ್ಲಿಂಗ್ ಹಗರಣ!

ಹೈದರಾಬಾದ್ ನ ಖ್ಯಾತ ಬಿರಿಯಾನಿ ಹೋಟೆಲ್ ಗಳಲ್ಲಿ 7000 ಕೋಟಿ ರೂ. ಬೃಹತ್ ಮೊತ್ತದ ಬಿಲ್ಲಿಂಗ್ ಹಗರಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ದೇಶಾದ್ಯಂತ ಹರಡಿಕೊಂಡಿರುವ ಹೈದರಾಬಾದ್ ನ ಮೂರು ಖ್ಯಾತ ಬಿರಿಯಾನಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಬಿಲ್ಲಿಂಗ್ ಪರಿಶೀಲಿಸಿದ ಐಟಿ ಅಧಿಕಾರಿಗಳು 60 ಟೆರಾಬೈಟ್ ನಷ್ಟು ಹಣ ವರ್ಗಾವಣೆಯ ದಾಖಲೆಗಳು ಪತ್ತೆಯಾಗಿದ್ದು, ಇವುಗಳ ಪರಿಶೀಲನೆ ನಡೆಸಿದ್ದಾರೆ.

ಕೌಶಲ್ಯ ಬಳಸಿ ಬಿಲ್ಲಿಂಗ್ ಮೂಲಕ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರ ಅಂದಾಜು ಮೌಲ್ಯ 70 ಸಾವಿರ ಕೋಟಿ ರೂ. ಎಂದು ಹೇಳಲಾಗಿದ್ದು, ಇದರ ಮೌಲ್ಯ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ತೆರಿಗೆ ವಂಚನೆಯ ಅನುಮಾನದ ಮೇಲೆ ಕಳೆದ ವರ್ಷ ನವೆಂಬರ್‌ನಲ್ಲಿ ದೇಶಾದ್ಯಂತ ಸರಣಿ ಹೋಟೆಲ್ ಗಳನ್ನು ಖ್ಯಾತ ಮೂರು ಹೋಟೆಲ್ ಗಳ 30ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಭಾರೀ ಪ್ರಮಾಣದ ವಂಚನೆ ಪತ್ತೆ ಹಚ್ಚಿದ್ದಾರೆ.

ಬಿಲ್ಲಿಂಗ್ ನಲ್ಲಿ ಯುಪಿಐ ವಹಿವಾಟು ಸೇರಿದಂತೆ ಡಿಜಿಟಲ್ ದಾಖಲೆಗಳ ವಿಶ್ಲೇಷಣೆ ಹಲವು ತಿಂಗಳ ಕಾಲ ನಡೆದಿದ್ದು, ಇನ್ನಷ್ಟು ದಿನಗಳ ಮುಂದುವರಿಯುವ ಸಾಧ್ಯತೆ ಇದೆ.

‘ಸಾವಿರಾರು ತಿನಿಸುಗಳು’ ಬಳಸುವ ಒಂದು ನಿರ್ದಿಷ್ಟ ಬಿಲ್ಲಿಂಗ್ ಸಾಫ್ಟ್‌ವೇರ್ ಮೂಲಕ ವಂಚಿಸಲಾಗುತ್ತಿತ್ತು. ಈ ಸಾಫ್ಟ್ ವೇರ್ ಮೂಲಕ ಬಿಲ್ಲಿಂಗ್ ಆದರೂ ಮಾರಾಟದ ದಾಖಲೆಗಳನ್ನು ಪೂರ್ಣವಾಗಿ ಮುಚ್ಚಿಡುತ್ತಿತ್ತು. ಕೆಲವು ಸಂದರ್ಭಗಳಲ್ಲಿ 30 ದಿನಗಳವರೆಗೆ, ಅಳಿಸಲಾದ ವಹಿವಾಟುಗಳ ದಾಖಲೆಗಳು ಮಾತ್ರ ಸಿಗುತ್ತಿದ್ದವು.

ಆರಂಭಿಕ ಅಂದಾಜಿನ ಪ್ರಕಾರ 2019/20 ರಿಂದ ನಿಗ್ರಹಿಸಲಾದ ಮಾರಾಟವು ಕನಿಷ್ಠ 70,000 ಕೋಟಿ ರೂ.ಗಳಷ್ಟಿತ್ತು, ಆಂಧ್ರಪ್ರದೇಶ ಮತ್ತು ತೆಲಂಗಾಣವೊಂದರಲ್ಲೇ 5,000 ಕೋಟಿ ರೂ.ಗಳಿಗಿಂತ ಹೆಚ್ಚು ಅಕ್ರಮವಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments