Home ದೇಶ ಹೆಂಡತಿ ಮುಖ ಎಷ್ಟೊತ್ತು ನೋಡಲು ಸಾಧ್ಯ? ಹೇಳಿಕೆಗೆ ನಟಿ ದೀಪಿಕಾ ಪಡುಕೋಣೆ ತರಾಟೆ

ಹೆಂಡತಿ ಮುಖ ಎಷ್ಟೊತ್ತು ನೋಡಲು ಸಾಧ್ಯ? ಹೇಳಿಕೆಗೆ ನಟಿ ದೀಪಿಕಾ ಪಡುಕೋಣೆ ತರಾಟೆ

ನವದೆಹಲಿ: ವಾರಕ್ಕೆ 90 ತಾಸು ಕೆಲಸ ಮಾಡುವ ಬಗ್ಗೆ ಎಲ್&ಟಿ ಮುಖ್ಯಸ್ಥ ಸುಬ್ರಮಣ್ಯನ್ ಹೇಳಿಕೆ ಮತ್ತು ಅದಕ್ಕೆ ಅವರು ಕೊಟ್ಟಿರುವ ಕಾರಣ (ಎಷ್ಟು ಹೊತ್ತು ಹೆಂಡತಿ ಮುಖ ನೋಡಿಕೊಂಡು ಕುಳಿತಿರಲು ಸಾಧ್ಯ) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

by Editor
0 comments
deepika padukone

ನವದೆಹಲಿ: ವಾರಕ್ಕೆ 90 ತಾಸು ಕೆಲಸ ಮಾಡುವ ಬಗ್ಗೆ ಎಲ್&ಟಿ ಮುಖ್ಯಸ್ಥ ಸುಬ್ರಮಣ್ಯನ್ ಹೇಳಿಕೆ ಮತ್ತು ಅದಕ್ಕೆ ಅವರು ಕೊಟ್ಟಿರುವ ಕಾರಣ (ಎಷ್ಟು ಹೊತ್ತು ಹೆಂಡತಿ ಮುಖ ನೋಡಿಕೊಂಡು ಕುಳಿತಿರಲು ಸಾಧ್ಯ) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಚರ್ಚೆಗೆ ದನಿಗೂಡಿಸಿರುವ ನಟಿ ದೀಪಿಕಾ ಪಡುಕೋಣೆ ಇದು ಅವರ (ಸುಬ್ರಮಣ್ಯನ್) ಅವರ ಮಾನಸಿಕ ಸ್ಥಿತಿ ತೋರುತ್ತದೆ ಎಂದು ಜರೆದಿದ್ದಾರೆ.

ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಆಗ್ಗಾಗ್ಗೆ ಜಾಗೃತಿ ಮೂಡಿಸುತ್ತಲೇ ಇರುವ ನಟಿ ದೀಪಿಕಾ ಪಡುಕೋಣೆ, ಭಾನುವಾರದಂದು ಉದ್ಯೋಗಿಗಳು ಕೆಲಸ ಮಾಡುವ ಬಗ್ಗೆ ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ನೀಡಿರುವ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಪತ್ರಕರ್ತ ಫಾಯೆ ಡಿಸೋಜಾ ಅವರ ವರದಿಯ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿರುವ ದೀಪಿಕಾ, ’ಇಂತಹ ಉನ್ನತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡಿ ಆಘಾತವಾಗಿದೆ’ ಎಂದು ಬರೆದಿದ್ದಾರೆ. ಇದಕ್ಕೆ ದೀಪಿಕಾ ’ಮೆಂಟಲ್ ಹೆಲ್ತ್ ಮ್ಯಾಟರ್ಸ್’ ಎಂಬ ಹ್ಯಾಶ್ಟ್ಯಾಗ್ ಸೇರಿಸಿದ್ದಾರೆ.

banner

’ವರ್ಕ್-ಲೈಫ್ ಸಮತೋಲನ ಮತ್ತು ಮಾನಸಿಕ ಆರೋದ್ಯದ ಬಗ್ಗೆ ಇಂಟರ್ನೆಟ್ನಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ ಎಸ್‌ಎನ್ ಸುಬ್ರಹ್ಮಣ್ಯನ್ ಅವರ ಹೇಳಿಕೆಗೆ ನಡಿ ದೀಪಿಕಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಂಪನಿ ನೀಡಿರುವ ಹೇಳಿಕೆಯಲ್ಲಿ, ’ಐ&ಟಿಯಲ್ಲಿ, ರಾಷ್ಟ್ರ ನಿರ್ಮಾಣವೇ ನಮ್ಮ ಆದ್ಯತೆಯಾಗಿದೆ. ಎಂಟು ದಶಕಗಳಿಂದ ನಾವು ಭಾರತದ ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ರೂಪಿಸುತ್ತಿದ್ದೇವೆ.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇದು ಉತ್ತಮ ಸಮಯ ಎಂದು ನಾವು ನಂಬುತ್ತೇವೆ. ಇದಕ್ಕಾಗಿ ಸಾಮೂಹಿಕ ಸಮರ್ಪಣೆ ಮತ್ತು ಪ್ರಯತ್ನ ಅಗತ್ಯವಿದೆ. ಪ್ರಗತಿಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಮ್ಮ ದೃಷ್ಟಿಯನ್ನು ಸಾಕಾರಗೊಳಿಸುವ ಪ್ರಯತ್ನ ಇದಾಗಿದೆ’ ಎಂದಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರ ಹೇಳಿಕೆಗಳು ದೊಡ್ಡ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತವೆ ಹಾಗೂ ಉತ್ತಮ ಫಲಿತಾಂಶಗಳಿಗೆ ಅಸಾಧಾರಣ ಪ್ರಯತ್ನದ ಅಗತ್ಯತೆಯನ್ನು ಒತ್ತಿ ಹೇಳಿದೆ. ಎಲ್&ಟಿಯಲ್ಲಿ, ಉತ್ಸಾಹ, ಉದ್ದೇಶ ಮತ್ತು ಕಾರ್ಯಕ್ಷಮತೆ ನಮ್ಮನ್ನು ಮುನ್ನಡೆಸುವ ಸಂಸ್ಕೃತಿಯನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದೆ.

ಸುಬ್ರಮಣ್ಯನ್ ಹೇಳಿದ್ದೇನು?

ಸಂಸ್ಥೆಯ ಆಂತರಿಕ ಸಭೆಯಲ್ಲಿ ಶನಿವಾರಗಳನ್ನು ಕಡ್ಡಾಯ ಕೆಲಸದ ದಿನವನ್ನಾಗಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಎಸ್.ಎನ್.ಸುಬ್ರಹ್ಮಣ್ಯನ್, ನಿಮ್ಮನ್ನು ಭಾನುವಾರಗಳಂದು ಕೆಲಸಕ್ಕೆ ತೊಡಗಿಸದಿರುವುದಕ್ಕೆ ವಿಷಾದವಿದೆ.

ಭಾನುವಾರದಂದೂ ನೀವು ಕೆಲಸ ಮಾಡುವಂತಾದರೆ ಅದು ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಏಕೆಂದರೆ ನಾನೂ ಕೂಡ ಭಾನುವಾರಗಳಂದು ಕೆಲಸ ಮಾಡುತ್ತೇನೆ. ಭಾನುವಾರ ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ?

ಎಷ್ಟು ಸಮಯ ನಿಮ್ಮ ಹೆಂಡತಿಯನ್ನೇ ನೋಡುತ್ತಾ ಕುಳಿತಿರುತ್ತೀರಿ? ಹೆಂಡತಿಯರೂ ಅಷ್ಟೇ ಎಷ್ಟು ಅಂತ ಗಂಡನ ಮುಖ ನೋಡುತ್ತಾ ಕುಳಿತಿರಲು ಸಾಧ್ಯ? ಅದರ ಬದಲು ಕಚೇರಿಗೆ ಬಂದು ಕೆಲಸದಲ್ಲಿ ತೊಡಗಿ ಎಂದು ನೌಕರರಿಗೆ ಕರೆ ನೀಡಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಲಾಸ್ ಏಂಜಲೀಸ್ ಕಾಡ್ಗಿಚ್ಚಿಗೆ 150 ಶತಕೋಟಿ ಡಾಲರ್ ನಷ್ಟ: ತುರ್ತು ಪರಿಸ್ಥಿತಿ ಘೋಷಣೆ ದೇಶಾದ್ಯಂತ ಜಲಮಾರ್ಗಗಳ ಅಭಿವೃದ್ದಿಗೆ 50 ಸಾವಿರ ಕೋಟಿ ಹೂಡಿಕೆಗೆ ಐಡಬ್ಲ್ಯೂಡಿಸಿ ನಿರ್ಧಾರ ಪ್ರೇಯಸಿಯ ಕೊಂದು 8 ತಿಂಗಳಿಂದ ಫ್ರಿಡ್ಜ್ ನಲ್ಲಿ ಶವ ಇರಿಸಿದ್ದ ವಿವಾಹಿತ! ಸಮಾಜ ನಮ್ಮ ಪ್ರೀತಿಒಪ್ಪಲ್ಲ: ಬೆಂಗಳೂರಿನಲ್ಲಿ ನಿನ್ನೆ ಪ್ರಿಯಕರ, ಇಂದು ಪ್ರೇಯಸಿ ಆತ್ಮಹತ್ಯೆ! ಹೆಂಡತಿ ಮುಖ ಎಷ್ಟೊತ್ತು ನೋಡಲು ಸಾಧ್ಯ? ಹೇಳಿಕೆಗೆ ನಟಿ ದೀಪಿಕಾ ಪಡುಕೋಣೆ ತರಾಟೆ ಬಂಗಾಳದಲ್ಲಿ ಕೈಕೊಟ್ಟ ಬಿಜೆಪಿ ಸದಸ್ಯತ್ವ ಅಭಿಯಾನ: ಬಿಜೆಪಿ ತೊರೆದ ಶೇ.40 ಮಂದಿ! ಎಕೆ 56 ಸೇರಿ ಅಪಾರ ಪ್ರಮಾಣದ ನಕ್ಸಲರ ಶಸ್ತ್ರಾಸ್ತ್ರ ಅರಣ್ಯದಲ್ಲಿ ಪತ್ತೆ ರಾಜ್ಯ ಸರ್ಕಾರದ ಸಂಧಾನ ಯಶಸ್ವಿ: ಆಶಾ ಕಾರ್ಯಕರ್ತೆಯರ ಮುಷ್ಕರ ವಾಪಸ್ ನಾನು ದೇವರಲ್ಲ, ನನ್ನಿಂದಲೂ ತಪ್ಪುಗಳು ಆಗಿವೆ: ಪ್ರಧಾನಿ ಮೋದಿ ಮನದ ಮಾತು ಪರೀಕ್ಷೆ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ!