Thursday, December 25, 2025
Google search engine
Homeದೇಶಅಮೆರಿಕ ನಂತರ ಭಾರತದ ಮೇಲೆ ಶೇ.50 ತೆರಿಗೆ ವಿಧಿಸಿದ ಮತ್ತೊಂದು ದೇಶ!

ಅಮೆರಿಕ ನಂತರ ಭಾರತದ ಮೇಲೆ ಶೇ.50 ತೆರಿಗೆ ವಿಧಿಸಿದ ಮತ್ತೊಂದು ದೇಶ!

ಅಮೆರಿಕ ತೆರಿಗೆ ಏರಿಕೆ ಮಾಡಿದ ನಂತರ ಇದೀಗ ಮತ್ತೊಂದು ದೇಶ ಭಾರತದ ಮೇಲೆ ತೆರಿಗೆ ಏರಿಕೆ ಮಾಡಿದೆ. ಇದರಿಂದ ಭಾರತದ ರಫ್ತು ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.

ರಷ್ಯಾ ಜೊತೆ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಭಾರತದ ಮೇಲೆ ಶೇ. 50ರಷ್ಟು ತೆರಿಗೆ ವಿಧಿಸಿತ್ತು. ಇದೀಗ ಮೆಕ್ಸಿಕೊ ದೇಶ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಲು ಮುಂದಾಗಿದೆ.

ಭಾರತ, ಚೀನಾ ಹಾಗೂ ಏಷ್ಯಾದ ಇತರ ದೇಶಗಳ ಮೇಲೆ ಸರಕು ಆಮದು ಮೇಲೆ ಶೇ. 50ರಷ್ಟು ಸುಂಕ ಏರಿಕೆ ಮಾಡಲು ಮೆಕ್ಸಿಕೋದ ಸಂಸತ್ತು ಅನುಮೋದನೆ ನೀಡಿದೆ.

ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಏಷ್ಯನ್ ದೇಶಗಳ ಮೇಲೆ ತೆರಿಗೆ ಹಾಕಲಾಗುತ್ತಿದೆ. 2026ರ ಜನವರಿ 1ರಿಂದ ಹೊಸ ಸುಂಕ ದರಗಳು ಜಾರಿಗೆ ಬರಲಿವೆ.

ಆಟೊಮೊಬೈಲ್ ಭಾಗಗಳು, ಜವಳಿ, ಪ್ಲಾಸ್ಟಿಕ್, ಉಕ್ಕು ಇತ್ಯಾದಿ ಹಲವು ಉತ್ಪನ್ನಗಳ ಆಮದು ಮೇಲೆ ಮೆಕ್ಸಿಕೋ ಟ್ಯಾರಿಫ್ ಹಾಕುತ್ತದೆ. ಭಾರತ, ಚೀನಾ, ಥಾಯ್ಲೆಂಡ್, ಇಂಡೋನೇಷ್ಯಾ, ಸೌತ್ ಕೊರಿಯಾ ಮೊದಲಾದ ದೇಶಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ.

ಭಾರತದ ಮೇಲೆಷ್ಟು ಪರಿಣಾಮ?

ಭಾರತವು ಟ್ರೇಡ್ ಸರ್​ಪ್ಲಸ್ ಹೊಂದಿರುವ ದೇಶಗಳಲ್ಲಿ ಮೆಕ್ಸಿಕೋ ಒಂದು. ಅಂದರೆ, ಮೆಕ್ಸಿಕೋದಿಂದ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ ರಫ್ತು ಮಾಡುವುದು ಹೆಚ್ಚು. ಕಳೆದ ವರ್ಷ (2024) ಭಾರತ ಹಾಗೂ ಮೆಕ್ಸಿಕೋ ನಡುವಿನ ಒಟ್ಟು ವ್ಯಾಪಾರ ವಹಿವಟು 11.7 ಬಿಲಿಯನ್ ಡಾಲರ್ ಆಗಿತ್ತು. ಇದು ಗರಿಷ್ಠ ವ್ಯಾಪಾರ ಎನಿಸಿದೆ. ಇದರಲ್ಲಿ ಭಾರತ 8.9 ಬಿಲಿಯನ್ ಡಾಲರ್ ರಫ್ತು ಮಾಡಿದರೆ, 2.8 ಬಿಲಿಯನ್ ಡಾಲರ್ ಆಮದು ಮಾಡಿಕೊಂಡಿದೆ.

ಮೆಕ್ಸಿಕೋಗೆ ಭಾರತದಿಂದ ಕಾರು, ವಾಹನ ಬಿಡಿಭಾಗಗಳನ್ನು ಹೆಚ್ಚಾಗಿ ರಫ್ತಾಗುತ್ತದೆ. ಮೆಕ್ಸಿಕೋ ಶೇ. 50ರಷ್ಟು ಟ್ಯಾರಿಫ್ ವಿಧಿಸುವುದರಿಂದ ಭಾರತದ ರಫ್ತಿಗೆ ತುಸು ಹೊಡೆತ ಬೀಳಲಿದೆ. ಅದರಲ್ಲೂ ಆಟೊಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಹಿನ್ನಡೆಯಾಗಬಹುದು.

ಟ್ರಂಪ್​ ಓಲೈಸಲು ಮೆಕ್ಸಿಕೋ ಯತ್ನ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೋ ವಿರುದ್ಧ ಬಾರಿ ಬಾರಿ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ. ಟ್ರಂಪ್ ಅವರ ಕೋಪ ತಗ್ಗಿಸಲು ಮೆಕ್ಸಿಕೋ ಭಾರತ, ಚೀನಾ ಮತ್ತಿತರ ದೇಶಗಳ ಮೇಲೆ ಟ್ಯಾರಿಫ್ ಕ್ರಮ ಕೈಗೊಂಡಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಮತ್ತೊಂದು ವಾದವೆಂದರೆ, ಮೆಕ್ಸಿಕೋ ತನ್ನ ಸ್ಥಳೀಯ ಉದ್ಯಮಕ್ಕೆ ಉತ್ತೇಜನ ಕೊಡಲು ಟ್ಯಾರಿಫ್ ಅಸ್ತ್ರ ಬಳಸುತ್ತಿರಬಹುದು. ಒಟ್ಟಾರೆ, ಮೆಕ್ಸಿಕೋದ ಶೇ. 50 ತೆರಿಗೆ ಏರಿಕೆಯಿಂದ ಭಾರತ, ಚೀನಾ, ಇಂಡೋನೇಷ್ಯಾದಂತಹ ದೇಶಗಳಿಗೆ ಪರಿಣಾಮಗಳಂತೂ ಆಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments