ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಕಾಲಿ ದಳದ ಮುಖಂಡ ಸುಬ್ಬೀರ್ ಸಿಂಗ್ ಬಾದಲ್ ಅವರನ್ನು ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿಯೇ ಗುಂಡಿಕ್ಕಿಗೆ ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಸಿಖ್ ಸಮುದಾಯದ ಪರಮೋಚ್ಛ ಸಂಸ್ಥೆಯಾದ ಅಕಾಲಿ ತಕ್ತ್ ನೀಡಿದ್ದ ಗೋಲ್ಡನ್ ಟೆಂಪಲ್ ಮತ್ತು ಗುರುದ್ವಾರದಲ್ಲಿ ಶೌಚಾಲಯ ಮತ್ತು ಅಡುಗೆ ಮನೆ ಸ್ಚಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾಗ ವೃದ್ಧರೊಬ್ಬರು ಏಕಾಏಕಿ ಗುಂಡಿನ ದಾಳಿಗೆ ಯತ್ನಿಸಿದ್ದಾರೆ.
ವೃದ್ಧನನ್ನು ಸ್ಥಳೀಯರು ಕೂಡಲೇ ಹಿಡಿದು ಯಾವುದೇ ಅನಾಹುತ ಆಗದಂತೆ ನೋಡಿಕೊಂಡಿದ್ದು, ಸುಖ್ಬೀರ್ ಸಿಂಗ್ ಬಾದಲ್ ಪಾರಾಗಿದ್ದಾರೆ. ದಾಳಿ ಪ್ರಯತ್ನದಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಅಕಾಲಿ ದಳದ ನಾಯಕನಿಗೆ 2015 ರಲ್ಲಿ ಗುರು ಗ್ರಂಥ ಸಾಹಿಬ್ನ ತ್ಯಾಗದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಅಕಾಲ್ ತಖ್ತ್ ಪ್ರತಿದಿನ ಒಂದು ಗಂಟೆ ದೇವಸ್ಥಾನದಲ್ಲಿ ದ್ವಾರಪಾಲಕರಾಗಿ ಕೆಲಸ ಮಾಡಬೇಕು. ಶೌಚಾಲಯ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿ ಹಲವು ಕೆಲಸಗಳನ್ನು ಮಾಡಬೇಕು ಎಂದು ಶಿಕ್ಷೆ ವಿಧಿಸಿತ್ತು.
ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅಕಾಲಿ ಸರ್ಕಾರದ ಅವಧಿಯಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್ಗೆ ಕ್ಷಮಾದಾನ ನೀಡುವಲ್ಲಿ ತಮ್ಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಸುಖ್ಬೀರ್ ಅಲ್ಲದೇ ಅವರ ಕಾಲದಲ್ಲಿ ಸಚಿವರಾಗಿದ್ದವರಿಗೂ ಶಿಕ್ಷೆ ಜಾರಿ ಮಾಡಲಾಗಿತ್ತು.
ಅಕಾಲ್ ತಖ್ತ್ ಜಥೇದಾರ್ ಗಿಯಾನಿ ರಘುಬೀರ್ ಸಿಂಗ್ ಅವರು ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿಗೆ ಮೂರು ದಿನಗಳಲ್ಲಿ ಸುಖ್ಬೀರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅಕಲ್ ತಖ್ತ್ ಸಾಹಿಬ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿ ೬ ತಿಂಗಳೊಳಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಅಕಾಲ್ ತಖ್ತ್ ಸೂಚಿಸಿದ್ದಾರೆ.