Thursday, December 25, 2025
Google search engine
Homeದೇಶಮುಸ್ಲಿಮರ ಓಲೈಕೆಗೆ ಮುಂದಾದ ಬಿಜೆಪಿ: 32 ಲಕ್ಷ ಕುಟುಂಬಗಳಿಗೆ ಸೌಗತ್-ಎ-ಮೋದಿ ಕಿಟ್ ವಿತರಣೆ

ಮುಸ್ಲಿಮರ ಓಲೈಕೆಗೆ ಮುಂದಾದ ಬಿಜೆಪಿ: 32 ಲಕ್ಷ ಕುಟುಂಬಗಳಿಗೆ ಸೌಗತ್-ಎ-ಮೋದಿ ಕಿಟ್ ವಿತರಣೆ

ರಂಜಾನ್ ಹಬ್ಬದ ಪ್ರಯುಕ್ತ ‘ಸೌಗತ್‌-ಎ-ಮೋದಿ’ ಅಭಿಯಾನದಡಿ ದೇಶಾದ್ಯಂತ 32 ಲಕ್ಷ ಮುಸ್ಲಿಮ್ ಕುಟುಂಬಗಳಿಗೆ ಬಿಜೆಪಿ ಈದ್‌ ಕಿಟ್‌ ವಿತರಿಸಲು ಮುಂದಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್‌ನಲ್ಲಿ ಮುಸ್ಲಿಮ್ ಕುಟುಂಬಗಳಿಗೆ ಈದ್ ಕಿಟ್ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳು ಯಾವುದೇ ತೊಂದರೆಯಿಲ್ಲದೇ ಈದ್ ಆಚರಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದ್ದು, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶಾದ್ಯಂತ 32,000 ಮಸೀದಿಗಳ ಸಹಕಾರದೊಂದಿಗೆ ಕಿಟ್ ವಿತರಣೆಗೆ ಸಹಾಯ ಮಾಡಲಿದ್ದಾರೆ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು ‘ಸೌಗತ್-ಎ-ಮೋದಿ’ ಅಭಿಯಾನದ ವಿಶಾಲ ದೃಷ್ಟಿಕೋನದ ಬಗ್ಗೆ ತಿಳಿಸಿದ್ದಾರೆ. ರಂಜಾನ್ ಮತ್ತು ಈದ್ ಸಮಯದಲ್ಲಿ ಮಾತ್ರವಲ್ಲದೇ, ಗುಡ್ ಫ್ರೈಡೇ, ಈಸ್ಟರ್, ನೌರುಜ್ ಮತ್ತು ಹೊಸ ವರ್ಷದಂತಹ ಇತರ ಮಹತ್ವದ ಸಂದರ್ಭಗಳಲ್ಲಿಯೂ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ರಂಜಾನ್ ಮತ್ತು ಈದ್ ಹಬ್ಬದ ಸಂದರ್ಭಗಳನ್ನು ಕೇಂದ್ರೀಕರಿಸಿ ಈ ಅಭಿಯಾನವು ಮಹತ್ವದ್ದಾಗಿದೆ. ಈ ಅಭಿಯಾನದ ಅಡಿಯಲ್ಲಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು 32 ಲಕ್ಷ ಮುಸ್ಲಿಂ ಕುಟುಂಬಗಳನ್ನು ತಲುಪಲು ಮತ್ತು 3 ಸಾವಿರ ಮಸೀದಿಗಳೊಂದಿಗೆ ಸಹಕರಿಸಲು ಯೋಜಿಸಿದೆ.

‘ಸೌಗತ್-ಎ-ಮೋದಿ’ ಅಭಿಯಾನದಡಿಯಲ್ಲಿ ವಿತರಿಸಲಾದ ಕಿಟ್‌ಗಳು, ಆಹಾರ ಪದಾರ್ಥಗಳ ಜೊತೆಗೆ, ಬಟ್ಟೆ, ವರ್ಮಿಸೆಲ್ಲಿ, ಖರ್ಜೂರ, ಒಣ ಹಣ್ಣುಗಳು ಮತ್ತು ಸಕ್ಕರೆಯನ್ನು ಒಳಗೊಂಡಿರುತ್ತವೆ. ಮಹಿಳೆಯರ ಕಿಟ್‌ಗಳು ಸೂಟ್‌ಗಳಿಗೆ ಬಟ್ಟೆಯನ್ನು ಒಳಗೊಂಡಿರುತ್ತವೆ. ಪುರುಷರ ಕಿಟ್‌ಗಳು ಕುರ್ತಾ-ಪೈಜಾಮಾಗಳನ್ನು ಒಳಗೊಂಡಿರುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments