ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಮಿತ್ರಪಕ್ಷಗಳು ಹಾಗೂ ಪ್ರತಿಪಕ್ಷಗಳು ಹೀನಾಯ ಸೋಲುಂಡಿವೆ.
ಮಹಾರಾಷ್ಟ್ರ ನಗರ ಪರಿಷತ್ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ 288 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 129 ಸ್ಥಾನಗಳಲ್ಲಿ ಗೆದ್ದು ಬಹುಮತ ಪಡೆದ ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ ಚಿಹ್ನೆಯ ಮೂಲಕ ಸ್ಪರ್ಧಿಸಿದ್ದ ಶೇ.48ರಷ್ಟು ಅಭ್ಯರ್ಥಿಗಳು ಅಂದರೆ 3300 ಅಭ್ಯರ್ಥಿಗಳು ಜಯ ಸಾಧಿಸಿರುವುದು ದಾಖಲೆಯಾಗಿದೆ. ಮುನ್ಸಿಪಾಲ್ ಗಳಲ್ಲಿ 129 ಕಡೆ ಬಿಜೆಪಿ ಅಭ್ಯರ್ಥಿಗಳು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ನೇತೃತ್ವದ ಮಯುತಿ ಮೈತ್ರಿಪಕ್ಷ ಅಭ್ಯರ್ಥಿಗಳು ಶೇ.75ರಷ್ಟು ಮಂದಿ ಗೆಲುವು ಕಂಡರು.
ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷಗಳಾದ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಮತ್ತು ಏಕನಾಥ್ ಶಿಂಧೆ ಬಣದ ಶಿವಸೇನೆಗಳು ಈ ಫಲಿತಾಂಶದಿಂದ ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಅಸ್ತಿತ್ವವೂ ಇವಿಎಂ, ಹಣದ ಬಲದ ಮುಂದೆ ನಾಶವಾಗಲಿದ್ದೀರಿ ಎಂದು ಎಚ್ಚರಿಸಿದೆ.


