Thursday, December 25, 2025
Google search engine
Homeದೇಶತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ: 3 ಗಂಟೆ ಮಳೆಯ ಆರ್ಭಟ!

ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ: 3 ಗಂಟೆ ಮಳೆಯ ಆರ್ಭಟ!

ನಿರೀಕ್ಷೆಯಂತೆ ಫೆಂಗಲ್ ಚಂಡಮಾರುತ ತಮಿಳುನಾಡು ಕಡಲ ತೀರಕ್ಕೆ ಶನಿವಾರ ರಾತ್ರಿ ಅಪ್ಪಳಿಸಿದ್ದು, ಸುಮಾರು 3  ಗಂಟೆಗಳ ಕಾಲ ಭಾರೀ ಮಳೆ ಗಾಳಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ತಮಿಳುನಾಡು ಮತ್ತು ಪುದುಚೇರಿ ನಡುವಿನ ಚಂಡಮಾರುತ ಅಪ್ಪಳಿಸಿದ್ದು, ಮುಂಜಾಗೃತ ಕ್ರಮವಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.

ವಾಯುಭಾರ ಕುಸಿತದಿಂದ ಸೃಷ್ಟಿಯಾದ ಫೆಂಗಲ್ ಚಂಡಮಾರುತ ಶನಿವಾರ ಮಧ್ಯಾಹ್ನ 2.30 ಸುಮಾರಿಗೆ ಅಪ್ಪಳಿಸುವ ನಿರೀಕ್ಷೆ ಇತ್ತು. ಆದರೆ ಸುಮಾರು 3 ಗಂಟೆ ತಡವಾಗಿ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿಯ ಕಾರೈಕಲ್ ಮತ್ತು ಮಹಾಬಲೀಪುರಂ ನಡುವೆ ಅಪ್ಪಳಿಸಿದೆ.

ಚಂಡಮಾರುತ ಅಬ್ಬರದಿಂದ ಭಾರೀ ಮಳೆ ಗಾಳಿ ಬೀಸುತ್ತಿದ್ದು, 90 ಕಿ.ಮೀಗಿಂತಲೂ ವೇಗವಾಗಿ ಗಾಳಿ ಅಬ್ಬರಿಸುತ್ತಿದೆ. ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್, ನಾಗಪಟ್ಟಣಂ, ಚೆನ್ನೈ, ಚೆಂಗಲ್ಪೇಟ್, ಅರಿಯಲೂರ್ ಮತ್ತು ಕಾಂಚೀಪುರಂಗಳಲ್ಲಿಯೂ ಶಾಲೆಗೆ ರಜೆ ಘೋಷಿಸಲಾಗಿದೆ.

ಪೂರ್ವ ನೌಕಾ ಕಮಾಂಡ್ ಪ್ರಧಾನ ಕಚೇರಿ, ತಮಿಳುನಾಡು ಮತ್ತು ಪುದುಚೇರಿ ನೌಕಾ ಕಚೇರಿಯ ಆದೇಶದಂತೆ ಈಗಾಗಲೇ ವಿಪತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸಕ್ರಿಯಗೊಂಡಿದೆ.  ನೆರವು ಮತ್ತು ವಿಪತ್ತು ಪರಿಹಾರ, ಶೋಧ ಕಾರ್ಯಕ್ಕೆ ಪಡೆಗಳು ಸಜ್ಜಾಗಿವೆ. ಹಾಗೆಯೇ, ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಡೈವಿಂಗ್ ತಂಡಗಳು ಸನ್ನದ್ಧವಾಗಿದ್ದು, ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಿವೆ.

ತುರ್ತು ಪರಿಸ್ಥಿತಿ ನಿರ್ವಹಿಸಲು ಆಹಾರ, ನೀರು ಮತ್ತು ಔಷಧಗಳಂತಹ ಅಗತ್ಯ ವಸ್ತುಗಳ ಪೂರೈಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯೆಲ್ಲೋ, ಆರೆಂಜ್ ಅಲರ್ಟ್: ಪ್ರಾದೇಶಿಕ ಹವಾಮಾನ ಕೇಂದ್ರ ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಆಲರ್ಟ್ ಘೋಷಿಸಿದೆ. ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments