ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆಯ ಬಿಸಿ ಭಾರತಕ್ಕೂ ತಟ್ಟಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 1,38,200 ರೂ.ಗೆ ಹಾಗೂ ಬೆಳ್ಳಿ ಬೆಲೆ ಕೆಜಿಗೆ 2,14,500 ರೂ.ಗೆ ಏರಿಕೆಯಾಗಿದೆ.
ಸೋಮವಾರ ಒಂದೇ ದಿನ ಚಿನ್ನದ ಬೆಲೆಯಲ್ಲಿ 1,685 ರೂ. ಏರಿಕೆ ದಾಖಲಿಸಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಟ್ಟಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಸೋಮವಾರ ಚಿನ್ನ ಜೊತೆಗೆ ಬೆಳ್ಳಿ ಮೌಲ್ಯವೂ ಹೆಚ್ಚಾಗಿದ್ದು, ಮತ್ತೊಂದು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು HDFC ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 80.85 USD ಅಥವಾ 1.86 USD ರಷ್ಟು ಹೆಚ್ಚಾಗಿ 4,420.35 USD ಗಳನ್ನು ತಲುಪಿದೆ. ಅಮೆರಿಕದಲ್ಲಿ ಬಡ್ಡಿದರಗಳು ಕಡಿಮೆಯಾಗುತ್ತಿರುವುದರಿಂದ, ಹಣಕಾಸಿನ ಕಾಳಜಿಗಳು ಹೆಚ್ಚಾಗುತ್ತಿವೆ. ಅಮೆರಿಕದ ಆರ್ಥಿಕತೆಯು ಹೆಚ್ಚು ಅನಿಶ್ಚಿತವಾಗುತ್ತಿರುವುದರಿಂದ ಬೆಳ್ಳಿ ಮತ್ತು ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಗಾಂಧಿ ಹೇಳಿದ್ದಾರೆ.
ಜಾಗತಿಕ ಅನಿಶ್ಚಿತತೆಗಳು ಸುರಕ್ಷಿತ ಸ್ವರ್ಗದ ಆಸ್ತಿಯತ್ತ ಚಿತ್ತ ಹರಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಸ್ಪಾಟ್ ಬೆಳ್ಳಿಯು ವಿದೇಶಿ ಮಾರುಕಟ್ಟೆಗಳಲ್ಲಿ 2.31 USD ಅಥವಾ 3.44 ರಷ್ಟು ಏರಿಕೆಯಾಗಿ, ಪ್ರತಿ ಔನ್ಸ್‌ಗೆ 69.45 USD ರಷ್ಟು ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ.
ಬೆಳ್ಳಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿರುವುದು, ಹೆಚ್ಚುತ್ತಿರುವ ಹೂಡಿಕೆ ಬೇಡಿಕೆ ಹಾಗೂ ಬಲವಾದ ಕೈಗಾರಿಕಾ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೋಟಕ್ ಮ್ಯೂಚುವಲ್ ಫಂಡ್‌ನ ನಿಧಿ ವ್ಯವಸ್ಥಾಪಕ ಸತೀಶ್ ದೊಂಡಪತಿ ಹೇಳಿದ್ದಾರೆ.
ಆಗ್‌ಮಾಂಟ್‌ನ ಸಂಶೋಧನಾ ಮುಖ್ಯಸ್ಥೆ ರೆನಿಶಾ ಚೈನಾನಿ, ಗಣಿಗಾರಿಕೆ ಅಡಚಣೆಗಳು ಮತ್ತು ಸೀಮಿತ ಪ್ರಸ್ತುತ ಬೆಳ್ಳಿ ದಾಸ್ತಾನುಗಳು ತೀವ್ರ ಪೂರೈಕೆ ಕೊರತೆಯನ್ನು ಉಂಟುಮಾಡುತ್ತಿವೆ, ಇದುವೆ ಬೆಲೆಗಳು ಹೆಚ್ಚಾಗಲು ಕಾರಣ ಎಂದು ಅವರು ಹೇಳಿದ್ದಾರೆ.


