ಆನ್ ಲೈನ್ ನಲ್ಲಿ ಆಹಾರ ಖಾದ್ಯಗಳನ್ನು ತರಿಸಿ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕನ್ ಬಿರಿಯಾನಿ ಈ ವರ್ಷವೂ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿ ಅಗ್ರಸ್ಥಾನದಲ್ಲಿದೆ.
ಆಹಾರ ಪೂರೈಕೆ ಮಾಡುವ ಸ್ವಿಗ್ಗಿ ಸಂಸ್ಥೆ 2025ನೇ ಸಾಲಿನ ವರದಿ ಬಿಡುಗಡೆ ಮಾಡಿದ್ದು, ದೇಶದಲ್ಲಿ 93 ದಶಲಕ್ಷ ಪ್ಲೇಟ್ ಬಿರಿಯಾನಿಯನ್ನು ಜನರು ಸೇವಿಸಿದ್ದಾರೆ. ಬಿರಿಯಾನಿಗೆ ಅತೀ ಹೆಚ್ಚು ಬೇಡಿಕೆ ಇದೆ. ಇದರಲ್ಲಿ ಚಿಕನ್ ಬಿರಿಯಾನಿ ಎಲ್ಲರ ಅಚ್ಚುಮೆಚ್ಚಿನದ್ದಾಗಿದ್ದು, 57.7 ದಶಲಕ್ಷ ಚಿಕನ್ ಬಿರಿಯಾನಿ ಆನ್ ಲೈನ್ ಬುಕ್ಕಿಂಗ್ ಆಗಿದೆ ಎಂದು ತಿಳಿಸಿದೆ.
ಪ್ರತಿ ನಿಮಿಷಕ್ಕೆ 194 ಬಿರಿಯಾನಿಗೆ ಆರ್ಡರ್ ಮಾಡಲಾಗುತ್ತದೆ. ಅಂದರೆ ಪ್ರತೀ ಸೆಕೆಂಡ್ ಗೆ 3.25 ಸೆಕೆಂಡ್ ಗೆ ಒಂದು ಬಿರಿಯಾನಿ ಆರ್ಡರ್ ಮಾಡಲಾಗುತ್ತದೆ.
ಬಿರಿಯಾನಿ ನಂತರ ಚಾಯ್, ಸಮೋಸ, ಬರ್ಗರ್, ಪಿಜಾ, ದೋಸೆ, ಇಡ್ಲಿ, ಚಾಕೋಲೇಟ್, ಕೇಕ್ ಆನ್ ಲೈನ್ ನಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ.
ವರ್ಷದಲ್ಲಿ ಬರ್ಗರ್ ಗೆ 44.2 ದಶಲಕ್ಷ ಆರ್ಡರ್ ಬಂದಿದ್ದು ಅತೀ ಹೆಚ್ಚು ಬೇಡಿಕೆಯಲ್ಲಿ 2ನೇ ಸ್ಥಾನದಲ್ಲಿದೆ. 40.1 ದಶಲಕ್ಷ ಆರ್ಡರ್ ಮೂಲಕ ಪಿಜಾ ಮೂರನೇ ಸ್ಥಾನ ಪಡೆದರೆ, 26.2 ದಶಲಕ್ಷ ದೋಸೆ ಹಾಗೂ ಇಡ್ಲಿ ನಾಲ್ಕನೇ ಸ್ಥಾನದಲ್ಲಿವೆ.
ಬರ್ಗರ್ ಅದರಲ್ಲೂ ಚಿಕನ್ ಬರ್ಗರ್ 6.,3 ಮಾರಾಟವಾಗಿದ್ದರೆ 4.2 ದಶಲಕ್ಷ ಸಸ್ಯಹಾರಿ ಬರ್ಗರ್ ಮಾರಾಟವಾಗಿದೆ. ಚಿಕನ್ ರೋಲ್ (4.1 ದಶಲಕ್ಷ), ವೆಜ್ ಪಿಜಾ (3.6 ದಶಲಕ್ಷ), ಚಿಕನ್ ನಗೆಟ್ಸ್ (2.9 ದಶಲಕ್ಷ) , ಚಾಯ್-ಸಮೋಸ (3.42 ದಶಲಕ್ಷ), ಏಲಕ್ಕಿ ಚಾಯ್ (2.9 ದಶಲಕ್ಷ) ಆನ್ ಲೈನ್ ಬುಕ್ಕಿಂಗ್ ಮೂಲಕ ಮಾರಾಟವಾಗಿವೆ.
ಇಡ್ಲಿಗೆ 11 ದಶಲಕ್ಷ, ದೋಸೆಗೆ 9.6 ದಶಲಕ್ಷ, ಪೂರಿ (1.26 ದಶಲಕ್ಷ), ಆಲೂ ಪರಾಠ (1.25 ದಶಲಕ್ಷ) ಅತೀ ಹೆಚ್ಚಿನ ಬೇಡಿಕೆಯ ಸಸ್ಯಹಾರಿ ಹಾಗೂ ದಕ್ಷಿಣ ಭಾರತದ ಆಹಾರಗಳಾಗಿವೆ.


