ಕೇಂದ್ರ ಸರ್ಕಾರ ಪಾಕಿಸ್ತಾನದ ಮತ್ತೊಬ್ಬ ರಾಯಭಾರ ಕಚೇರಿಯ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಕಳೆದ 8 ದಿನಗಳಲ್ಲಿ ಭಾರತದಿಂದ ಉಚ್ಛಾಟನೆಗೊಂಡ ಎರಡನೇ ಅಧಿಕಾರಿ ಆಗಿದ್ದಾರೆ.
ಹುದ್ದೆಗೆ ತಕ್ಕಂತೆ ಹಾಗೂ ನಿಯಮ ಮೀರಿ ಕೆಲಸ ಮಾಡಿದ ಪಾಕಿಸ್ತಾನದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯನ್ನು 24 ಗಂಟೆಯೊಳಗೆ ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಪೆಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭಾರತ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ 9 ವಾಯುನೆಲೆಗಳ ಮೇಲೆ ದಾಳಿ ಮಾಡಿತ್ತು.


