ಬೆಂಗಳೂರು ಮತ್ತು ಕೇರಳದ ಎರ್ನಾಕುಲಂ ಸೇರಿದಂತೆ ನಾಲ್ಕು ಹೊಸ ವಂದೇ ಭಾರತ್ ರೈಲು ಸಂಚಾರವನ್ನು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ.
ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಹೊಸ ವಂದೇ ಭಾರತ್ ರೈಲು ಸಂಚಾರ ಘೋಷಿಸಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ವಂದೇ ಭಾರತ್ ರೈಲುಗಳ ಸಂಖ್ಯೆ 164ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ರೈಲು ಸಂಚಾರ ಆರಂಭವಾಗಲಿದೆ. ದೆಹಲಿಯ ಫಿರೋಜ್ ಪುರ್ ಮತ್ತು ಪಂಜಾಬ್ ರಾಜಧಾನಿ ಪಟಿಯಾಲ ನಡುವೆ ಮತ್ತೊಂದು ರೈಲು ಸಂಚಾರ ಆರಂಭವಾಗಲಿದೆ.
ಉತ್ತರ ಪ್ರದೇಶದ ವಾರಣಾಸಿ ಮತ್ತು ಮಧ್ಯಪ್ರದೇಶದ ಖಜುರಾಹೊ ನಡುವೆ ಹಾಗೂ ಉತ್ತರ ಪ್ರದೇಶದ ಲಕ್ನೋ ಹಾಗೂ ಈಶಾನ್ಯ ರಾಜ್ಯ ಸಂಪರ್ಕಿಸುವ ಸಹರ್ನಾಪುರ್ ನಡುವೆ ವಂದೇ ಭಾರತ್ ರೈಲು ಸಂಚಾರವಾಗಲಿದೆ.
ದಿನದಿಂದ ದಿನಕ್ಕೆ ವಂದೇ ಭಾರತ್ ರೈಲು ಪ್ರಯಾಣದ ಬೇಡಿಕೆ ಹೆಚ್ಚಾಗುತ್ತಿದ್ದು, 2024-25ನೇ ಸಾಲಿನಲ್ಲಿ ಶೇ.102.01ರಷ್ಟು ಹೆಚ್ಚಳವಾದರೆ 2025-26 (ಜೂನ್ ವರೆಗೆ) ಶೇ.105.03ರಷ್ಟು ಏರಿಕೆಯಾಗಿದೆ.


