Thursday, December 25, 2025
Google search engine
Homeದೇಶತಪ್ಪಿಸಿಕೊಳ್ಳಲು ನದಿಗೆ ಹಾರಿದ ಪಹಲ್ಗಾವ್ ಉಗ್ರರಿಗೆ ನೆರವು ನೀಡಿದ್ದ ವ್ಯಕ್ತಿ ಸಾವು

ತಪ್ಪಿಸಿಕೊಳ್ಳಲು ನದಿಗೆ ಹಾರಿದ ಪಹಲ್ಗಾವ್ ಉಗ್ರರಿಗೆ ನೆರವು ನೀಡಿದ್ದ ವ್ಯಕ್ತಿ ಸಾವು

ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾವ್ (pehelgam) ಭಯೋತ್ಪಾಕದ ದಾಳಿ ನಡೆಸಿದ ಉಗ್ರರಿಗೆ ಊಟ ಮತ್ತು ಆಶ್ರಯ ನೀಡಿದ್ದಾನೆ ಎನ್ನಲಾದ ವ್ಯಕ್ತಿ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳು ನದಿಗೆ ಹಾರಿದ್ದರಿಂದ ಮೃತಪಟ್ಟಿದ್ದಾನೆ.

23 ವರ್ಷದ ಇಮ್ತಿಯಾಜ್‌ ಅಹ್ಮದ್ ಮಾಗ್ರೆ ಮೃತಪಟ್ಟ ವ್ಯಕ್ತಿ. ಈತ ಪಹಲ್ಗಾಮ್‌ ದಾಳಿಕೋರರಿಗೆ ಸಕಲ ನೆರವು ನೀಡಿದ್ದ ಎಂಬ ಶಂಕೆಯ ಮೇಲೆ ಭಧ್ರತಾ ಪಡೆಗಳು ವಿಚಾರಣೆ ನಡೆಸಲು ತೆರಳಿದ್ದ ವೇಳೆ ಸೋಮವಾರ ಈ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಮ್ತಿಯಾಜ್‌ ಅಹ್ಮದ್‌ ಮಾಗ್ರೆನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಇಮ್ತಿಯಾಜ್‌ ತಾನು ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದ.

ಪೊಲೀಸರು ಇಮ್ತಿಯಾಜ್‌ನನ್ನು ಭಯೋತ್ಪಾದಕರು ಅಡಗಿದ್ದ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ, ಆತ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದಾನೆ. ಆದರೆ ತುಂಬ ದೂರ ಈಜಲಾಗದೇ, ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾಗಿ ಭದ್ರತಾ ಪಡೆಗಳು ತಿಳಿಸಿವೆ. ಆದರೆ ಈ ಘಟನೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಒತ್ತಾಯ ಮಾಡಲಾಗಿದೆ.

ಕುಲ್ಗಾಮ್ ಜಿಲ್ಲೆಯ ತಂಗ್ಮಾರ್ಗ್ ಪ್ರದೇಶದ ಕಾಡಿನಲ್ಲಿ ಅಡಗಿದ್ದ ಪಹಲ್ಗಾಮ್ ಭಯೋತ್ಪಾದಕರಿಗೆ, ಇಮ್ತಿಯಾಜ್‌ ಅಹ್ಮದ್ ಮಾಗ್ರೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದ. ಈ ವಿಷಯ ತಿಳಿದ ಪೊಲೀಸರು ಆತನನ್ನು ಕಳೆದ ಶನಿವಾರ ವಶಕ್ಕೆ ಪಡೆದರು. ವಿಚಾರಣೆ ವೇಳೆ, ತಾನು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವುದಾಗಿ ಆತ ಒಪ್ಪಿಕೊಂಡನು. ನಂತರ, ಭಾನುವಾರ ಬೆಳಗ್ಗೆ, ಪೊಲೀಸರು ಮತ್ತು ಸೈನ್ಯದ ಜಂಟಿ ತಂಡದೊಂದಿಗೆ ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ಮಾಡಲು ಮಾಗ್ರೆಯನ್ನು ಕರೆದೊಯ್ಯಲಾಗಿತ್ತು.ಈ ವೇಳೆ ಭದ್ರತಾ ಪಡೆಗಳ ವಾಹನ ವೇಶಾವ್ ನದಿಗೆ ಹಾರಿದನು.

ಎತ್ತರದ ಪ್ರದೇಶದಿಂದ ಸೆರೆಹಿಡಿಯಲಾದ ವೀಡಿಯೊದಲ್ಲಿ, ಮಾಗ್ರೆ ನದಿಗೆ ಹಾರುವ ಮೊದಲು ಅರಣ್ಯ ಪ್ರದೇಶವನ್ನು ಗಮನಿಸುತ್ತಿರುವುದು ಕಂಡುಬರುತ್ತದೆ. ಆತ ನದಿಗೆ ಹಾರಿದ ತಕ್ಷಣ, ಪ್ರವಾಹದ ರಭಸಕ್ಕೆ ಕೊಚ್ಚಿ ಹೋದನು. ಈ ಸಂಪೂರ್ಣ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವವರನ್ನು ಭದ್ರತಾ ಪಡೆಗಳು ಖಂಡಿಸಿವೆ. “ಭದ್ರತಾ ಪಡೆಗಳನ್ನು ಮಾಗ್ರೆಯ ದುರದೃಷ್ಟಕರ ಸಾವಿಗೆ ತಪ್ಪಾಗಿ ದೂಷಿಸಬಾರದು” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಆರೋಪಗಳು ಕೇಳಿಬಂದಿವೆ. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಈ ಸಾವಿನಲ್ಲಿ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ.”ಕುಲ್ಗಾಮ್‌ನಲ್ಲಿ ಮತ್ತೊಂದು ಶವವು ನದಿಯಲ್ಲಿ ಪತ್ತೆಯಾಗಿದೆ. ಇದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments