Wednesday, December 24, 2025
Google search engine
Homeದೇಶಡಿಸೆಂಬರ್ 19ಕ್ಕೆ ಮೋದಿ ಸರ್ಕಾರ ಪತನ: ಸಂಜಯ್​ ರಾವತ್​ ಹೊಸ ಬಾಂಬ್

ಡಿಸೆಂಬರ್ 19ಕ್ಕೆ ಮೋದಿ ಸರ್ಕಾರ ಪತನ: ಸಂಜಯ್​ ರಾವತ್​ ಹೊಸ ಬಾಂಬ್

ದೆಹಲಿಯಲ್ಲಿ ರಾಜಕೀಯ ಭೂಕಂಪನ ಸಂಭವಿಸಲಿದ್ದು, 2025ರ ಡಿಸೆಂಬರ್​ 19ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್​ ರಾವತ್​ ಭವಿಷ್ಯ ನುಡಿದಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್​ ಚೌಹಾಣ್, ಕೇಂದ್ರದಲ್ಲಿ ಆಡಳಿತ ಬದಲಾವಣೆ ಆಗಲಿದೆ ಎಂಬ ಹೇಳಿರುವ ಬೆನ್ನಲ್ಲೇ ಮುಂಬೈನಲ್ಲಿ ಬುಧವಾರ ಮಾಧ್ಯಮಗಳ ಮುಂದೆ ಸಂಜಯ್​ ರಾವತ್​ ಹೇಳಿಕೆ ಕುತೂಹಲ ಮೂಡಿಸಿದೆ.

ನರೇಂದ್ರ ಮೋದಿಗೆ 75 ವರ್ಷ ತುಂಬಿದ ಬೆನ್ನಲ್ಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕೇಂದ್ರ ಸಚಿವರಾಗಲಿ, ಬಿಜೆಪಿ ಮುಖಂಡರಾಗಲಿ ಯಾವುದೇ ಹೇಳಿಕೆ ನೀಡದೇ ಇದ್ದರೂ ರಾಜಕೀಯ ವಲಯದಲ್ಲಿ ವದಂತಿ ಹರಡುತ್ತಲೇ ಇದೆ.

ಈ ಎಲ್ಲದರ ನಡುವೆ ಕೇಂದ್ರ ಸರ್ಕಾರ ಪತನದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್​ 19ರಂದು ದೆಹಲಿ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಗುಸುಗುಸು ಸುದ್ದಿ ಇದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಈ ರಾಜಕೀಯ ಬದಲಾವಣೆಯಲ್ಲಿ ಅಮೆರಿಕ ಸರ್ಕಾರದ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಸೇನಾ (ಯುಬಿಟಿ) ವಕ್ತಾರ, ರಾಜಕೀಯ ಭೂಕಂಪನದ ಕೇಂದ್ರ ಅಮೆರಿಕದಲ್ಲಿದೆ. ಕೆಲವು ದಿನದ ಹಿಂದೆ ಪೃಥ್ವಿರಾಜ್​ ಚೌಹಾಣ್​ ಹೇಳಿದಂತೆ, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಬಿಜೆಪಿ ತನ್ನೆಲ್ಲ ನಾಯಕರನ್ನು ದೆಹಲಿಯಲ್ಲಿಯೇ ಇರಲು ಕೇಳಿಕೊಂಡಿದೆ. ಎಲ್ಲ ಬಿಜೆಪಿ ನಾಯಕರು ದೆಹಲಿಯಲ್ಲೇ ಇರಬೇಕೆಂದು ಮತ್ತು ನಗರ ತೊರೆಯದಂತೆ ಕೇಳಿಕೊಳ್ಳಲಾಗಿದೆ. ಹಾಗಾಗಿ, ಸ್ಪಷ್ಟವಾಗಿ ಏನೋ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್​ ನಾಯಕ ಮತ್ತು ಮಾಜಿ ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್​ ಚೌಹಾಣ್​ ಕೂಡಾ ಅಕ್ಟೋಬರ್​ 19ರಂದು ದೇಶದ ರಾಜಕೀಯದಲ್ಲಿ ದೊಡ್ಡ ಭೂಕಂಪನವಾಗಲಿದೆ. ದೇಶದ ಪ್ರಧಾನಿ ಬದಲಾಗಲಿದ್ದಾರೆ. ಮರಾಠಿ ವ್ಯಕ್ತಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲೂ ಕೂಡ ಇದೇ ರೀತಿಯ ಊಹಾಪೋಹ ಹರಿದಾಡಿತ್ತು. ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೆಸರು ಚರ್ಚೆಗೆ ಬಂದಿತು. ಗಡ್ಕರಿ ಆರ್​ಎಸ್​ಎಸ್​ ಬೆಂಬಲ ಹೊಂದಿದ್ದು, ಮೋದಿ ಆಪ್ತವಲಯದಲ್ಲಿದ್ದಾರೆ. ಈ ಸುದ್ದಿಗಳ ನಡುವೆ ಬಿಜೆಪಿ ಐದು ಬಾರಿ ಶಾಸಕರಾಗಿದ್ದ ಬಿಹಾರದ ನಿತಿನ್​ ನಬಿನ್​ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ನಡುವೆ ಶಿವಸೇನಾ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೀಟು ಹಂಚಿಕೆ ಅಂತಿಮ ಘಟ್ಟ ತಲುಪಿದ್ದು, ಇನ್ನೊಂದೆರಡು ದಿನಗಳಲ್ಲಿ ಈ ಕುರಿತು ಘೋಷಿಸಲಾಗುವುದು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ ಥಾಣೆ, ಕಲ್ಯಾಣ್-ಡೊಂಬಿವಿಲಿ ಮತ್ತು ನವಿ ಮುಂಬೈಗೆ ಸೀಟು ಹಂಚಿಕೆ ಘೋಷಣೆಗಳನ್ನು ಮಾಡಲಾಗುವುದು ಎಂದು ರಾವತ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments