ನೂತನ ಆದಾಯ ತೆರಿಗೆ ಮಸೂದೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ.
1961ರಿಂದ ಜಾರಿಯಲ್ಲಿದ್ದ ಆದಾಯ ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಿದ ನೂತನ ತೆರಿಗೆ ಪದ್ಧತಿಯನ್ನು ಮಂಡಿಸಲಾಯಿತು. ಮಸೂದೆ ಇದೀಗ ಪರಾಮರ್ಶೆ ಮಂಡಳಿ ಮುಂದೆ ಹೋಗಿದೆ.
ನೂತನ ತೆರಿಗೆ ಮಸೂದೆ 823 ಪುಟಗಳನ್ನು ಹೊಂದಿದ್ದು, 23 ಅಧ್ಯಾಯಗಳಿದ್ದು, 298 ಸೆಕ್ಷನ್, 14 ಶೆಡ್ಯೂಲ್ ಗಳು ಇವೆ. ಈ ಹಿಂದಿನ ಕಠಿಣ ವಾಕ್ಯಗಳನ್ನು ಸರಳೀಕರಣಗೊಳಿಸಿ, ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ತೆರಿಗೆ ಪದ್ಧತಿಯನ್ನು ವಿವರಿಸಲಾಗಿದೆ.
ಮಸೂದೆ ಮಂಡಿಸಲಾಗಿದ್ದು, ಜಾರಿಯಾದ ಮೊದಲ ವರ್ಷವನ್ನು ಪ್ರಾಯೋಗಿಕ ಎಂದು ಪರಿಗಣಿಸಲಾಗುವುದು. ಈ ಸಮಯದಲ್ಲಿ ತೆರಿಗೆ ಪಾವತಿದಾರರ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.


