Thursday, December 25, 2025
Google search engine
Homeದೇಶಒಂದು ವರ್ಷದ ಸ್ಮಾರ್ಟ್ ಫೋನ್ ಒಂದೇ ತಿಂಗಳಲ್ಲಿ ಮಾರಾಟ: ಭಾರತ ಹೊಸ ದಾಖಲೆ!

ಒಂದು ವರ್ಷದ ಸ್ಮಾರ್ಟ್ ಫೋನ್ ಒಂದೇ ತಿಂಗಳಲ್ಲಿ ಮಾರಾಟ: ಭಾರತ ಹೊಸ ದಾಖಲೆ!

ನವದೆಹಲಿ: ಕಳೆದ ತಿಂಗಳು ಸ್ಮಾರ್ಟ್‌ಫೋನ್ ರಫ್ತು ಪ್ರಮಾಣ 3 ಶತಕೋಟಿ ಡಾಲರ್ (25,೦೦೦ ಕೋಟಿ ರೂ.) ದಾಟಿದ್ದು, ಹೊಸ ದಾಖಲೆ ಬರೆದಿದೆ.

2025ರ ಜನವರಿಯಲ್ಲಿ ರಫ್ತು ಮಾಡಲಾದ 3.14 ಶತಕೋಟಿ ಡಾಲರ್ 2020-2021ರ ಇಡೀ ವರ್ಷಕ್ಕೆ ಆದ ಸ್ಮಾರ್ಟ್‌ಫೋನ್ ರಫ್ತು ಈ ಒಂದು ತಿಂಗಳಿನಲ್ಲಿಯೇ ಆಗಿದೆ (3.14 ಶತಕೋಟಿ ಡಾಲರ್) ಎಂದು ಅಂಕಿ-ಅಂಶ ಹೇಳುತ್ತದೆ.

2024ರ ಜನವರಿಗೆ ಹೋಲಿಸಿದರೆ ಇದು ಶೇಕಡಾ 140 ರಷ್ಟು ಹೆಚ್ಚಾಗಿದೆ, ಆಗ ಭಾರತವು 1.31 ಶತಕೋಟಿ ಡಾಲರ್ ಸ್ಮಾರ್ಟ್‌ಫೋನ್ ರಫ್ತು ದಾಖಲಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಎಕ್ಸ್ ನಲ್ಲಿ 2024-2025 ರ ಸ್ಮಾರ್ಟ್ ಫೋನ್ ರಫ್ತು 2.25 ಟ್ರಿಲಿಯನ್ ರೂ.ಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಪೋಸ್ಟ್ ಮಾಡಿದ್ದಾರೆ.

2023-2024ರಲ್ಲಿ ಇದರ ರಫ್ತು ಪ್ರಮಾಣ 15.6 ಶತಕೋಟಿ ಡಾಲರ್ ಆಗಿತ್ತು. ಜನವರಿಯಲ್ಲಿ ಒಟ್ಟು ರಫ್ತಿನಲ್ಲಿ, ಸುಮಾರು 70 ಪ್ರತಿಶತದಷ್ಟು ಐಫೋನ್ ಸಾಗಣೆಯ ಮೂಲಕ ಬಂದಿದೆ.

ಫಾಕ್ಸ್ಕಾನ್ ಒಟ್ಟು ರಫ್ತಿನ ಶೇಕಡಾ 33ರಷ್ಟನ್ನು ಹೊಂದಿದ್ದು, ಇದು 960 ದಶಲಕ್ಷ ಡಾಲರ್‌ಗೆ ಸಮನಾಗಿದೆ. ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಂಡ ಟಾಟಾ ಎಲೆಕ್ಟ್ರಾನಿಕ್ಸ್ 800 ದಶಲಕ್ಷ ಡಾಲರ್ ವಹಿವಾಟಿನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಉಳಿದಂತೆ ಪೆಗಾಟ್ರಾನ್ (ಈಗ ಟಾಟಾ ವಶ) ತನ್ನ ಅತ್ಯಧಿಕ ಮಾಸಿಕ ರಫ್ತು (500 ದಶಲಕ್ಷ ಡಾಲರ್) ದಾಟಿದೆ. ಜನವರಿಯಲ್ಲಿ, ಎಲ್ಲಾ ಮೂರು ಆಪಲ್ ಮಾರಾಟಗಾರರು ತಮ್ಮ ಹಿಂದಿನ ಒಂದು ತಿಂಗಳ ರಫ್ತು ದಾಖಲೆಗಳನ್ನು ಮೀರಿದ್ದಾರೆ.

ಭಾರತದ ವೆಚ್ಚದ ಅನಾನುಕೂಲತೆಗಳನ್ನು ಪರಿಹರಿಸುವ ಮೂಲಕ ಸ್ಪರ್ಧಾತ್ಮಕತೆ ಹೆಚ್ಚಿಸಲು ನಾಲ್ಕು ವರ್ಷಗಳ ಹಿಂದೆ ಪರಿಚಯಿಸಲಾದ ಸ್ಮಾರ್ಟ್‌ಫೋನ್ ಪಿಎಲ್‌ಐ ಯೋಜನೆಯ ಯಶಸ್ಸನ್ನು ಇದು ಸೂಚಿಸುತ್ತದೆ.

ಪಿಎಲ್‌ಐ ಯೋಜನೆಯು ಆಪಲ್‌ನಂತಹ ಕಂಫನಿಗಳು ಭಾರತಕ್ಕೆ ಪೂರೈಕೆ ಸರಪಳಿಗಳನ್ನು ಸ್ಥಳಾಂತರಿಸಲು ಕಾರಣವಾಗಿದೆ ಅಂದಿನಿಂದ ರಫ್ತು ಪ್ರಮಾಣವೂ ಹೆಚ್ಚಾಗಿದೆ. 2021ರ ಹಣಕಾಸು ವರ್ಷದಲ್ಲಿ 3.1 ಬಿಲಿಯನ್ ಡಾಲರ್ ಇದ್ದ ಸ್ಮಾರ್ಟ್‌ಫೋನ್ ರಫ್ತು 2021-202ರಲ್ಲಿ 5.8 ಶತಕೋಟಿ ಡಾಲರ್‌ಗೆ ಏರಿತು.

2022-2023ರಲ್ಲಿ ರಫ್ತು 11.1 ಶತಕೋಟಿ ಮತ್ತು 2024ರ ಹಣಕಾಸು ವರ್ಷದಲ್ಲಿ 15.6 ಬಿಲಿಯನ್ ಡಾಲರ್‌ಗೆ ಏರಿದೆ. ಒಂದು ದಶಕದ ಹಿಂದೆ, 2014-2015 ರಲ್ಲಿ, ಸ್ಮಾರ್ಟ್‌ಫೋನ್ ರಫ್ತಿನಲ್ಲಿ ಭಾರತ 167ನೇ ಸ್ಥಾನದಲ್ಲಿತ್ತು. ಡಿಸೆಂಬರ್ 2024 ರ ವೇಳೆಗೆ ಎರಡನೇ ಅತಿದೊಡ್ಡ ಸ್ಥಾನಕ್ಕೆ ಏರಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments