ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಯೋತ್ಪಾದನೆ ವಿರುದ್ಧದ ದಾಳಿಯ ಐತಿಹಾಸಿಕ ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮರ್ಮು ಹೇಳಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಯೋತ್ಪಾದನೆ ವಿರುದ್ಧ ಹೋರಾಟದ ಕುರಿತು ಐತಹಾಸಿಕ ಸಾಕ್ಷಿಯಾಗಿ ಉಳಿಯಲಿದೆ ಎಂದರು.
ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಹೇಡಿತನ ಹಾಗೂ ಅಮಾನವೀಯ ದಾಳಿಯಾಗಿದೆ. ಇದಕ್ಕೆ ಪ್ರತಿಕಾರವಾಗಿ ನಡೆದ ಆಪರೇಷನ್ ಸಿಂಧೂರ್ ಸೂಕ್ತ ಹಾಗೂ ಸಮರ್ಪಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಏಪ್ರಿಲ್ 22ರಂದು ಪೆಹಲ್ಗಾಮ್ ನಲ್ಲಿ ನಡೆಸಿದ ಉಗ್ರರು 22 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಕಾರ್ಯಚರಣೆ ನಡೆಸಿ 100 ಉಗ್ರರನ್ನು ಹತ್ಯೆಗೈದಿದೆ. ಪಾಕಿಸ್ತಾನದ ಡ್ರೋಣ್ ಹಾಗೂ ವಾಯು ದಾಳಿ ನಡೆಸುವ ಪ್ರಯತ್ನ ನಡೆಸಿತಾದರೂ ಭಾರತ ಸ್ವದೇಶೀ ನಿರ್ಮಿತ ಅಸ್ತ್ರಗಳ ಮೂಲಕ ವಿಫಲಗೊಳಿಸಿತು ಎಂದು ದ್ರೌಪದಿ ಮರ್ಮು ಹೇಳಿದರು.


