ಹೆಣ್ಮಕ್ಕಳ ಸಿಂಧೂರ ಅಳಿಸಿದರೆ ಏನಾಗುತ್ತದೆ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಆಪರೇಷನ್ ಸಿಂಧೂರ ಭಾರತೀಯ ಮಹಿಳೆಯರಿಗೆ ಅರ್ಪಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚಾರಣೆ ನಂತರ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಉಗ್ರರ ವಿಶ್ವವಿದ್ಯಾಲಯಗಳಿಂತಿದ್ದ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ ಎಂದರು.
ಉಗ್ರರನ್ನು ಮಟ್ಟ ಹಾಕಿ ಹೋರಾಟಕ್ಕೆ ಬೆಂಬಲ ನೀಡುವ ಬದಲು ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರತಿಕಾರವಾಗಿ ಭಾರತ ತಕ್ಕ ಉತ್ತರ ನೀಡಿತು. ಇದರಿಂದ ಪಾಕಿಸ್ತಾನದ ಬಣ್ಣ ಬಯಲಾಯಿತು ಎಂದು ಅವರು ಹೇಳಿದರು.
ಪಾಕಿಸ್ತಾನವನ್ನು 3 ದಿನಗಳಲ್ಲೇ ಮಣ್ಣು ಮುಕ್ಕಿಸಿದೆವು. ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನ ಭಾರತದ ಡಿಒಆರ್ ಒ ಸಂಪರ್ಕಿಸಿ ಕದನ ವಿರಾಮದ ಮನವಿ ಮಾಡಿತು.
ಪಾಕಿಸ್ತಾನ ಇನ್ನು ಮುಂದೆ ಯಾವುದೇ ರೀತಿ ಉಗ್ರರಿಗೆ ಬೆಂಬಲ ನೀಡಿದರೆ ನಾವು ಮತ್ತೆ ದಾಳಿ ಮಾಡಬೇಕಾಗುತ್ತದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಂತರ ಇದೀಗ ಸಿಂಧೂರ್ ಯಶಸ್ವಿಯಾಗಿ ನಡೆದಿದೆ. ಭಾರತದ ಮೂರು ಸೇನಾಪಡೆಗಳು ಗಡಿಯಲ್ಲಿ ಕಟ್ಟೆಚ್ಚರ ವಹಿಸಿವೆ ಎಂದರು.
ಪಾಕಿಸ್ತಾನ ಅಣುಬಾಂಬ್ ಹೆಸರಿನಲ್ಲಿ ಬ್ಲಾಕ್ ಮಾಡುವುದು ನಿಲ್ಲಿಸಬೇಕು. ಈ ಬೆದರಿಕೆಗಳಿಗೆ ಭಾರತ ಯಾವತ್ತೂ ಬಗ್ಗುವುದಿಲ್ಲ. ಈ ದಾಳಿಯಲ್ಲಿ ಭಾರತದ ಸ್ವದೇಶೀ ಶಸ್ತ್ರಾಸ್ತ್ರಗಳು ಸಮರ್ಪಕವಾಗಿ ಕೆಲಸ ಮಾಡಿ ಯಶಸ್ಸು ಸಾಧಿಸಿವೆ ಎಂದು ಅವರು ಹೇಳಿದರು.


