Wednesday, December 24, 2025
Google search engine
Homeದೇಶಹವಾಮಾನ ವೈಪರಿತ್ಯದಿಂದ ಲ್ಯಾಂಡ್‌ ಮಾಡದ ಪ್ರಧಾನಿ ಹೆಲಿಕಾಫ್ಟರ್:‌ ಕೋಲ್ಕತಾಗೆ ವಾಪಸ್‌

ಹವಾಮಾನ ವೈಪರಿತ್ಯದಿಂದ ಲ್ಯಾಂಡ್‌ ಮಾಡದ ಪ್ರಧಾನಿ ಹೆಲಿಕಾಫ್ಟರ್:‌ ಕೋಲ್ಕತಾಗೆ ವಾಪಸ್‌

ದಟ್ಟ ಮಂಜಿನ ಕಾರಣ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ಲ್ಯಾಂಡ್‌ ಮಾಡಲು ಆಗದೇ ರಾಜಧಾನಿ ಕೋಲ್ಕತಾಗೆ ಮರಳಿದ ಘಟನೆ ಶನಿವಾರ ನಡೆದಿದೆ.

ತಾಹೇಪುರ್‌ ಹೆಲಿಪ್ಯಾಡ್‌ ನಲ್ಲಿ ದಟ್ಟ ಮಂಜಿನ ಕಾರಣ ಹೆಲಿಕಾಫ್ಟರ್‌ ಇಳಿಸಲು ಆಗಲಿಲ್ಲ. ಈ ಕಾರಣ ಕೋಲ್ಕತಾಗೆ ಮರಳಿದ ಹೆಲಿಕಾಫ್ಟರ್‌ ಕೆಲವೇ ಸಮಯದ ನಂತರ ತಾಹೇಪುರ್‌ ಹೆಲಿಪ್ಯಾಡ್‌ ಗೆ ಮರಳಿದೆ.
ಪ್ರಧಾನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿಯೇ ಕೆಲ ಸಮಯ ಕಾಯಬೇಕಾಗಿದ್ದು, ಅಧಿಕಾರಿಗಳು ಮಂಜು ಕರಗಿ ಸ್ಪಷ್ಟವಾಗಿ ಕಾಣುವವರೆಗೂ ಕಾಯಲು ನಿರ್ಧರಿಸಿದ್ದಾರೆ.

ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ತಾಹೇಪುರ್‌ ರ್ಯಾಲಿಯಲ್ಲಿ ವರ್ಚೂವಲ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೋ ಅಥವಾ ನೂರಾರು ಕಿ.ಮೀ.ದೂರವನ್ನು ಕಾರಿನಲ್ಲಿ ಪ್ರಯಾಣಿಸುವರೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments